ಶುಖವನ ಗಿಳಿಗಳೊಂದಿಗೆ ಸಮಯ ಕಳೆದ ರಾಜ್ಯಪಾಲರು

ಹೊಸದಿಗಂತ ವರದಿ, ಮೈಸೂರು:

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನಿರ್ಮಿಸಿರುವ ಶುಕವನ’ ಮತ್ತು ಬ್ನೊಸಾಯಿ ಉದ್ಯಾನವನ್ನು ವೀಕ್ಷಣೆ ಮಾಡಿದರು. ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿರ್ಮಿಸಿರುವ ಭುವಿ ವನವನ್ನು ಅನಾವರಣಗೊಳಿಸಿದರು. ಬಳಿಕ ವಿವಿಧ ಜಾತಿಯ ಗಿಳಿಗಳ ಕಲರವ ಆಲಿಸಿದರು. ತದನಂತರ ಪಕ್ಷಿಗಳಿಗೆ ಬೀಜಗಳು, ಕಾಳುಗಳನ್ನು ನೀಡಿದರು.

ಈ ಸಂದರ್ಭದಲ್ಲಿ ದತ್ತಪೀಠದ ಕಿರಿಯ ಸ್ವಾಮೀಜಿಗಳಾದ ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮೀಜಿ, ಡಾ. ನಿತ್ಯಾನಂದ ರಾವ್, ಬಿಜೆಪಿ ಮುಖಂಡ ಕೇಬಲ್ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!