ಹೊಸದಿಗಂತ ವರದಿ, ರಾಯಚೂರು :
ರಾಜ್ಯ ಸರ್ಕಾರ ಜಾತಿ ಜನಗಣತಿಯನ್ನು ಕೈಬಿಟ್ಟು ಬಡತನ ರೇಖೆಯನ್ನು ಆಧರಿಸಿ, ಎಲ್ಲ ಜನತೆಗೆ ಒಳ್ಳೆಯದಾಗುವ ರೀತಿಯಲ್ಲಿ ಹಾಗೂ ಬಡತನ ರೇಖೆಗಿಂತ ಕೆಳಗಿರುವಂತವರನ್ನು ಮೇಲೆತ್ತುವ ಕೆಲಸವನ್ನು ಮಾಡುವುದರತ್ತ ಸರ್ಕಾರ ಮುಂದಾಗಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರ ಸೇಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಜಾತಿ ಜನಗಣತಿಯ ಕಾಂತರಾಜ ವರದಿಯನ್ನು ಜಾರಿಗೆ ತರುವುದಾಗಿ ಹೇಳಿದೆ ಎಂಬ ಪ್ರಶ್ನೆಗೆ ಮೇಲಿನಂತೆ ಶ್ರೀಗಳು ಪ್ರತಿಕ್ರೀಯಿಸಿದರು.
ಜಾತಿ ಜನಗಣತಿ ಮಾಡುವ ಮೂಲಕ ಜನರ ಗಮನವನ್ನು ತಮ್ಮೆಡೆಗೆ ಸೆಳೆಯ ಬೇಕೆಂಬ ಕಾರಣಕ್ಕೆ ಆತುರತೆ ಕೆಲವರಲ್ಲಿ ಇರಬಹುದು. ಇಗಾಗಲೆ ಜಾತಿ, ಜಾತಿ ವರ್ಗೀಕರಣ ಅತಿಯಾಗಿ ಆಗಿರುವ ಕಾರಣ ಪರಸ್ಪರ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದರು.
ಯಾವುದೇ ಜಾತಿ, ಧರ್ಮದಲ್ಲಿರುವ ಆರ್ಥಿಕವಾಗಿ ಹಿಂದಿಳಿದವರಿಗೆ, ದುರ್ಬಲದವರನ್ನು ಗುರುತಿಸಿ ಅವರನ್ನು ಮೇಲೆತ್ತುವ ಕಾರ್ಯವನ್ನು ಮಾಡಬೇಕು. ಜಾತಿ ಜನಗಣತಿಯಿಂದಾಗಿ ಕೆಲ ಜಾತಿಯವರಿಗೆ ಬಹಳ ತೊಂದರೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಯಾವುದೇ ಪಕ್ಷದ ರಾಜಕಾರಣಿ ಇರಬಹುದು ತಮ್ಮ ಅಧಿಕಾರ, ಅಂತಸ್ತುಗಳನ್ನು ಪಡೆಯುವುದಕ್ಕಾಗಿನೇ ಈ ಹೋರಾಟ, ಸಂಘರ್ಷ ಅಲ್ಲಲ್ಲಿ ಹುಟ್ಟುಹಾಕುವುದನ್ನು ಕಾಣಬಹುದಾಗಿದೆ. ಜಾತಿ ಜನಗಣತಿಯನ್ನು ಕೈಬಿಟ್ಟರೆ ಇಂತಹ ಸಂಘರ್ಷಗಳು ಕೊನೆಯಾಗಲು ಸಧ್ಯವಾಗುತ್ತದೆ. ಆದರೆ ರಾಜಕಾರಣಿಗಳು ಅಧಿಕಾರ ಹಿಡಿಯುವುದಕ್ಕೆ ಇಂತಹ ಚಾತುರ್ಯತೆಯನ್ನು ಮಾಡುವುದನ್ನು ಆಗಾಗ ಕಾಣಬಹುದಾಗಿದೆ ಎಂದು ಹೇಳಿದರು.
ರಾಜಕಾರಣಿಗಳಿಗೆ ಅಧಿಕಾರವಷ್ಟೇ ಮುಖ್ಯವಾಗಿರಬಾರದು, ಈ ದೇಶದ ಸಮಗ್ರತೆ ಮತ್ತು ಹಿತ ದೃಷ್ಠಿಯಿಂದ ಹಾಗೂ ಧರ್ಮ ಧರ್ಮಗಳಲ್ಲಿ, ಜಾತಿ ಜಾತಿಗಳಲ್ಲಿನ ಕೊಂಡಿಗಳನ್ನು ಭದ್ರಪಡಿಸಬೇಕೆ ಹೊರತು ಅವುಗಳನ್ನು ಇನ್ನಷು ವಿಗಟನೆ ಮಾಡುವ ಕೆಲಸಕ್ಕೆ ಯಾರೂ ಕೈಹಾಕಬಾರದು. ರಾಜ್ಯದಲ್ಲಿ ಎಲ್ಲ ಸಮುದಾಯದ, ವರ್ಗದ ಜನತೆ ಬಾಳಿಕೊಂಡು ಬರುತ್ತಿದ್ದಾರೆ ಅದನ್ನು ಕದಡುವ ಕೆಲಸವನ್ನು ಯಾರೂ ಮಾಡಬಾರದು ಎಂದು ತಿಳಿಸಿದರು.
ಪುರಾತನ, ಸನಾತನ ಧರ್ಮ, ವೀರಶೈವ ಪಂಚ ಪೀಠಗಳು ಜಾತಿ ಧರ್ಮಗಳನ್ನು ಮೀರಿ ಎಲ್ಲ ಸಮುದಾಯದವರಿಗೆ ಸಮನ್ವತೆಯ ಶಾಂತಿ ಸಂದೇಶವನ್ನು ಹಿಂದು ನೀಡಿವೆ ಮುಂದೆನೂ ನೀಡುತ್ತವೆ ಎಂದು ಹೇಳಿದರು.
ಮೈಸೂರಲ್ಲಿನ ಮಹಿಸಾಸುರ ದಸರಾ ಮಾಡುವುದಕ್ಕೆ ಹೋರಾಟ ಮಾಡಬೇಕೆನ್ನುವುದು ಅವರ ಅಭಿಪ್ರಾಯವಾಗಿದೆ. ಆದರೆ ಅಧಿಕಾರದ ಚುಕ್ಕಾಣೆ ಹಿಡಿದವರು ಸೂಕ್ತ ನಿರ್ಧಾರ ತಗೆದುಕೊಳ್ಳಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬರಲ್ಲಿ ಒಂದೊoದು ಅಭಿಪ್ರಾಯವಿರುವುದು ಸಹಜ. ಯಾವ ಕಾರ್ಯಕ್ರಮ ಮಾಡುವುದರಿಂದ ಒಳ್ಳೆಯದಾಗುತ್ತದೆ. ಯಾವುದನ್ನು ಮಾಡಿದರೆ ಜನರ ಮನಸ್ಸುಗಳು ವಿಕಾರಗೊಳ್ಳುತ್ತವೆ ಎನ್ನುವುದಕ್ಕೆ ಆದ್ಯತೆ ನೀಡಬೇಕು. ಒಂದು ಗೂಡಿ ಕೆಲಸ ಮಾಡುವ ಕಾರ್ಯಕ್ರಮಗಳಿಗೆ ಆದ್ಯತೆಯನ್ನು ನೀಡ ಬಬೇಕು ವಿನಾಕಾರಣ ಗೊಂದಲಗಳನ್ನು ಹುಟ್ಟು ಹಾಕುವುದು ಸರಿಯಾದುದಲ್ಲ. ಎಂದು ತಿಳಿಸಿದರು.
ಮೈಸೂರು ದಸರಾ ಜಗತ್‌ಪ್ರಸಿದ್ಧವಾದುದು ಇದರಲ್ಲಿ ಸಾಂಸ್ಕೃತಿಕ, ಮನೋರಂಜನಾತ್ಮಕಾವಾಗಿ ನಡೆದುಕೊಂಡು ಬರುತ್ತಿವೆ. ಅದರಂತೆ ನಡದುಕೊಳ್ಳಬೇಕು ವಿನಾಕಾರಣ ವಿಕಾರಾತ್ಮಕವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದಕ್ಕೆ ಆಸ್ಪದ ನೀಡಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.