ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಯಾರಂಟಿ ನಷ್ಟವನ್ನು ಭರಿಸಲು ರಾಜ್ಯ ಸರ್ಕಾರ ಸಾರಿಗೆ ಇಲಾಖೆಯ ಆಸ್ತಿಯನ್ನು ಮಾರಾಟ ಮಾಡಲು ಯೋಜಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಸಾರಿಗೆ ಇಲಾಖೆಗೆ ನೀಡಬೇಕಾದ 7154 ಕೋಟಿ ರೂ. ಅನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. 2023-24ಕ್ಕೆ ಶಕ್ತಿ ಯೋಜನೆಯಡಿ 1480 ಕೋಟಿ ರೂ., 2024-25ಕ್ಕೆ ಶಕ್ತಿ ಯೋಜನೆಯಡಿ 360 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರಕಾರ ಗ್ಯಾರಂಟಿ ನೀಡಿ ಸಾರಿಗೆ ಸಂಸ್ಥೆಯನ್ನು ಮಾರಾಟ ಮಾಡಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭವಿಷ್ಯ ನಿಧಿ, ನಿವೃತ್ತ ನೌಕರರ ಕೊಡುಗೆ, ಇಂಧನ ಬಾಕಿ, ಸಾಲ ಬಾಕಿ ಮತ್ತಿತರ ಬಿಲ್ ಸೇರಿದಂತೆ 5,614 ಕೋಟಿ ಸಾಲವಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ.