ದಿಗಂತ ವರದಿ ಕಲಬುರಗಿ:
ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಶಹಾಬಾದ ಮತಗಟ್ಟೆ ಸಂ.16ರಲ್ಲಿ ಮತದಾರರಿಂದ ಜಿನುಗುತ್ತಿರುವ ಮಳೆ ನಡುವೆಯೂ ಕೊಡೆ ಹಿಡಿದುಕೊಂಡು ಬಂದು ಪದವೀಧರರು ಮತ ಚಲಾಯಿಸಿದರು .
ನಿನ್ನೆ ರಾತ್ರಿಯಿಂದಲೇ ಹಲವು ಕಡೆಗಳಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಸೋಮವಾರ ಬೆಳಗ್ಗೆಯೂ ಮಳೆ ಮುಂದುವರಿದಿದೆ . ಈ ನಡುವೆ ಬೆಳಿಗ್ಗೆ ೭ ಗಂಟೆಯಿಂದ ಆರಂಭವಾದ ಮತದಾನದಲ್ಲಿ ಮತದಾರ ಪ್ರಭು ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು.
ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತ ನೀಡಲು ಅವಕಾಶ ಹಿನ್ನೆಲೆಯಲ್ಲಿ ಮತದಾನದ ಸರಿಯಾದ ಕ್ರಮ, ಮತ ಮೌಲ್ಯ ಮತ್ತು ಅಪಮೌಲ್ಯದ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸುವ ಪೋಸ್ಟರ್,ನ್ನು ಮತಗಟ್ಟೆ ಹೊರಗೆ ಅಳವಡಿಸಲಾಗಿದೆ.