ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಅಮೆರಿಕದಲ್ಲಿ ಅಧ್ಯಕ್ಷ ಜೋ ಬಿಡೆನ್ ಅವರು ಔತಣಕೂಟವೊಂದನ್ನು ಏರ್ಪಡಿಸಿದ್ದರು.
ಔತಣಕೂಟದಲ್ಲಿ ಅಮೆರಿಕದ ಗಣ್ಯರು ಹಾಗೂ ಭಾರತದ ಘಟಾನುಘಟಿ ನಾಯಕರುಗಳು ಭಾಗಿಯಾಗಿದ್ದರು. ಕೈಗಾರಿಕೋದ್ಯಮಿಗಖಾದ ಮುಖೇಶ್ ಅಂಬಾನಿ, ಆನಂದ್ ಮಹೀಂದ್ರಾ ಭಾಗಿಯಾಗಿದ್ದರು.
ಜೊತೆಗೆ ಗೂಗಲ್ ಸಿಇಒ ಸುಂದರ್ ಪಿಚೈ, ಸತ್ಯ ನಾಡೆಲ್ಲಾ, ಇಂದ್ರಾ ನೂಯಿ, ಆಪಲ್ ಸಿಇಒ ಟಿಮ್ ಕುಕ್ ಕೂಡ ಭಾಗಿಯಾಗಿದ್ದರು. ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಸೇರಿದಂತ ಇತರ ಗಣ್ಯರು ಭಾಗಿಯಾಗಿದ್ದರು.