ಇಂಡಿಯಾ ಡೇ ಪೆರೇಡ್‌ನಲ್ಲಿ ಗ್ರ್ಯಾಂಡ್ ಮಾರ್ಷಲ್ ಗೌರವ! ಅಮೆರಿಕ ಪ್ರವಾಸಕ್ಕೆ ರೆಡಿಯಾದ ರಶ್ಮಿಕಾ-ವಿಜಯ್ ದೇವರಕೊಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟಾಲಿವುಡ್‌ನ ಜನಪ್ರಿಯ ತಾರೆಯರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಹುಮಾನ್ಯ ಗೌರವವೊಂದು ಇವರಿಗೆ ಲಭಿಸಿದ್ದು, ಆಗಸ್ಟ್‌ನಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವರ್ಷದ ಇಂಡಿಯಾ ಡೇ ಪೆರೇಡ್ ನ್ಯೂಯಾರ್ಕ್‌ನಲ್ಲಿ ನಡೆಯಲಿದ್ದು ಇದನ್ನು ಮುನ್ನಡೆಸಲಿರುವ ಗ್ರ್ಯಾಂಡ್ ಮಾರ್ಷಲ್‌ಗಳಾಗಿ ಆಯ್ಕೆಯಾಗಿರುವುದನ್ನು ಇಬ್ಬರೂ ಸಾಮಾಜಿಕ ಮಾಧ್ಯಮದ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.

ಇದುವರೆಗೆ ವದಂತಿಗಳಲ್ಲಿ ಮಾತ್ರ ಕೇಳಿಬರುತ್ತಿದ್ದ ಈ ಜೋಡಿ ಇದೀಗ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲು ಸಜ್ಜಾಗಿದೆ. ಆಗಸ್ಟ್ 17 ರಂದು ನ್ಯೂಯಾರ್ಕ್‌ನ ಮ್ಯಾಡಿಸನ್ ಅವೆನ್ಯೂದಲ್ಲಿ ನಡೆಯಲಿರುವ 43ನೇ ಇಂಡಿಯಾ ಡೇ ಪೆರೇಡ್ ಕಾರ್ಯಕ್ರಮದಲ್ಲಿ, ಅವರು ಮುಖ್ಯ ಪಾತ್ರವಹಿಸಲಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಅಮೆರಿಕದ ನೆಲದಲ್ಲಿ ಭಾರತೀಯ ಸಮುದಾಯದೊಂದಿಗೆ ಆಚರಿಸಲು ತಾವು ನಿರೀಕ್ಷೆ ಹೊಂದಿದ್ದೇವೆ ಎಂದು ವಿಜಯ್ ದೇವರಕೊಂಡ ತಿಳಿಸಿದ್ದಾರೆ. “ತ್ರಿವರ್ಣ ಧ್ವಜವನ್ನು ವಿದೇಶಿ ನೆಲದಲ್ಲಿ ಹಾರಿಸುವುದು ನನಗೆ ಹೆಮ್ಮೆಯ ವಿಷಯ,” ಎಂದಿದ್ದಾರೆ.

ಭಾರತೀಯ ಸಂಘಗಳ ಒಕ್ಕೂಟ (Federation of Indian Associations) ಪ್ರತಿ ವರ್ಷ ನ್ಯೂಯಾರ್ಕ್‌ನಲ್ಲಿ ಈ ಪೆರೇಡ್ ಆಯೋಜಿಸುತ್ತದೆ. ಈ ಬಾರಿ 43ನೇ ವರ್ಷದ ಸಂಭ್ರಮದಲ್ಲಿ ಗ್ರ್ಯಾಂಡ್ ಮಾರ್ಷಲ್‌ಗಳಾಗಿ ವಿಜಯ್ ಮತ್ತು ರಶ್ಮಿಕಾ ಹೆಸರುಗಳನ್ನು ನ್ಯೂಯಾರ್ಕ್ ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಘೋಷಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!