ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗಿನ ಹಾಸ್ಯ ನಟ ಬ್ರಹ್ಮಾನಂದಂ ಅವರ ಎರಡನೇ ಮಗನ ಮದುವೆ ಅದ್ಧೂರಿಯಾಗಿ ನಡೆಯಿತು. ಈ ಮದುವೆಗೆ ಸಿನಿಮಾ ಮತ್ತು ರಾಜಕೀಯದ ಎಲ್ಲಾ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡು ನವ ದಂಪತಿಗೆ ಆಶೀರ್ವಾದ ಮಾಡಿದರು. ಸಿದ್ಧಾರ್ಥ ಮತ್ತು ಐಶ್ವರ್ಯ ಮದುವೆ ಶುಕ್ರವಾರ (ಆಗಸ್ಟ್ 18) ರಾತ್ರಿ 10.45 ಕ್ಕೆ ಹೈದರಾಬಾದ್‌ನ ಗಚಿಬೌಲಿ ಫೈನಾನ್ಶಿಯಲ್ ಡಿಸ್ಟ್ರಿಕ್ಟ್‌ನಲ್ಲಿರುವ ಅನ್ವಯ ಕನ್ವೆನ್ಷನ್ಸ್‌ನಲ್ಲಿ ನೆರವೇರಿತು.
ಈ ಸಮಾರಂಭಕ್ಕೆ ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ಸಿನಿಮಾಟೋಗ್ರಫಿ ಸಚಿವ ತಲಸಾನಿ ಶ್ರೀನಿವಾಸ್ ಯಾದವ್, ರಾಮ್ ಚರಣ್ ಮತ್ತು ಪವನ್ ಕಲ್ಯಾಣ್, ಮೋಹನ್ ಬಾಬು, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, ಎರ್ರಬೆಲ್ಲಿ ದಯಾಕರ್ ರಾವ್, ಗಂಗೂಲಾ ಕಮಲಾಕರ್ ಸೇರಿದಂತೆ ಹಲವು ರಾಜಕೀಯ ಗಣ್ಯರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನವದಂಪತಿಗೆ ಆಶೀರ್ವದಿಸಿದರು.
ಬ್ರಹ್ಮಾನಂದಂ ಅವರ ಕಿರಿಯ ಮಗ ಸಿದ್ಧಾರ್ಥ್ ವಿದೇಶದಲ್ಲಿ ಓದಿ ಅಲ್ಲಿಯೇ ಕೆಲಸ ಮಾಡುತ್ತಿದ್ದಾರಂತೆ. ಸಿದ್ಧಾರ್ಥ್‌ಗೆ ಸಿನಿಮಾಗಳಲ್ಲಿ ಅಷ್ಟಾಗಿ ಆಸಕ್ತಿ ಇಲ್ಲವಾದ್ದರಿಂದ ವ್ಯಾಪಾರದತ್ತ ಗಮನ ಕೊಟ್ಟಿದ್ದಾರೆ.