ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳದಲ್ಲಿ ಪುಟ್ಟ ತಗಡಿನ ಶೆಡ್ ಒಂದರಲ್ಲಿ ವೃದ್ಧೆ ಜೀವನ ನಡೆಸ್ತಿದ್ದಾರೆ. ಇವರ ಮನೆಯಲ್ಲಿ ಹೆಚ್ಚಿನ ವರ್ಗದ ಜನರಂತೆ ಟಿವಿ, ವಾಶಿಂಗ್ ಮಶೀನ್, ಫ್ರಿಡ್ಜ್ ಇಲ್ಲ, ಅಷ್ಟೇ ಯಾಕೆ ಮೊಬೈಲ್ ಅಥವಾ ಐರನ್ ಬಾಕ್ಸ್ ಇಲ್ಲ.
ಆದರೆ ಬೆಳಕಿಗಾಗಿ ಅಜ್ಜಿ ಮನೆಯಲ್ಲಿ ಎರಡೇ ಎರಡು ಬಲ್ಬ್ ಇದೆ, ಈ ಬಲ್ಪ್‌ಗಳನ್ನು ಬಿಟ್ಟರೆ ಕರೆಂಟ್‌ನಲ್ಲಿ ಓಡೋ ವಸ್ತುವೇ ಇಲ್ಲ. ಅಜ್ಜಿಗೆ ಕರೆಂಟ್ ಬಿಲ್ ಎಷ್ಟು ಬರೋಕೆ ಸಾಧ್ಯ? ಬೇಸಿಕ್ ಅನ್ಕೋತೀರಾ ಅಲ್ವಾ? ಖಂಡಿತಾ ಇಲ್ಲ, ಅಜ್ಜಿಗೆ ಬಂದಿರೋದು ಬರೋಬ್ಬರಿ ಒಂದು ಲಕ್ಷ ರೂಪಾಯಿ ಕರೆಂಟ್ ಬಿಲ್, ಅಜ್ಜಿ ತನ್ನ ಆಸ್ತಿಯನ್ನು ಮಾರಿಕೊಂಡ್ರೂ ಕರೆಂಟ್ ಬಿಲ್ ಕಟ್ಟೋಕಾಗೋದಿಲ್ಲ.
ಕೊಪ್ಪಳದ ಭಾಗ್ಯನಗರ ನಿವಾಸಿ ಗಿರಿಜಮ್ಮ ಮನೆಗೆ 1 ಲಕ್ಷದ ಮೂರು ಸಾವಿರ ಕರೆಂಟ್ ಬಿಲ್ ಬಂದಿದೆ. ಈ ಹಿಂದೆ ಬರೀ 80,90 ರೂಪಾಯಿ ಬಿಲ್ ಬರ‍್ತಿತ್ತು. ಈಗ ಏಕಾಏಕಿ ಲಕ್ಷಗಟ್ಟಲೆ ಬಿಲ್ ಬಂದಿದೆ, ಈಗ ನಾನೇನು ಮಾಡಲಿ ಎಂದು ಅಜ್ಜಿ ಕಣ್ಣೀರಿಟ್ಟಿದ್ದಾರೆ. ಈ ವಿಷಯ ಜೆಸ್ಕಾಂ ಅಧಿಕಾರಿಗಳ ಕಣ್ಣಿಗೆ ಬಿದ್ದು, ಪರಿಶೀಲನೆ ನಡೆಸಿದರೆ ನಿಜಾಂಶ ತಿಳಿದುಬರುತ್ತದೆ.