ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಕುತೂಹಲ ಕೆರಳಿಸಿರುವ ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಸಮಾಧಿ ಅಗೆಯುವ ಕಾರ್ಯ ಐದನೇ ದಿನಕ್ಕೆ ಕಾಲಿಟ್ಟಿದೆ.
ಎಲ್ಲರ ಚಿತ್ತ ಈಗ ಈ ಬೆಳವಣಿಗೆಯತ್ತ ನೆಟ್ಟಿದ್ದು, ಇಂದು ಅಸ್ಥಿಪಂಜರ ಸಿಕ್ಕೀತೇ ಎಂಬ ಕುತೂಹಲ ಎಲ್ಲೆಡೆ ಮನೆಮಾಡಿದೆ.
ಶುಕ್ರವಾರ ನೇತ್ರಾವತಿ ಪಕ್ಕದ ದಟ್ಟ ಕಾಡಿನ ಪರಿಸರದಲ್ಲಿ ದೂರುದಾರ ಗುರುತಿಸಿರುವ ಏಳನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ಮುಂದುವರಿದಿದೆ.
ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಸಮ್ಮುಖದಲ್ಲಿ ಅನಾಮಿಕ ದೂರುದಾರನ ಮಾಹಿತಿಯಂತೆ ಎಸ್ ಐಟಿ ನೆಲ ಅಗೆಯುವ ಕಾರ್ಯ ನಡೆಸುತ್ತಿದೆ.
ತನಿಖೆಯ ಬಗ್ಗೆಯಾಗಲಿ, ಅವಶೇಷ ಲಭಿಸಿರುವ ಬಗ್ಗೆಯಾಗಲಿ ಎಸ್ ಐಟಿ ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ.