ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಸ್‌ನ ಅತ್ಯನ್ನುತ ನಾಗರಿಕ ಪ್ರಶಸ್ತಿ ಪ್ರದಾನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗ್ರೀಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯನ್ನು ಗ್ರೀಸ್ ಅಧ್ಯಕ್ಷೆ ಕಟೆರಿನಾ ಎನ್. ಸಕೆಲ್ಲರೊಪೌಲೌ ಅವರು ಶುಕ್ರವಾರ ಪ್ರದಾನ ಮಾಡಿದರು.

ಈ ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಜನರೆಡೆಗೆ ಗ್ರೀಸ್ ಹೊಂದಿರುವ ಗೌರವವನ್ನು ಈ ಪ್ರಶಸ್ತಿ ಸಂಕೇತಿಸುತ್ತಿದೆ. ಇದಕ್ಕಾಗಿ ಗ್ರೀಸ್ ಅಧ್ಯಕ್ಷೆ ಹಾಗೂ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಮುತ್ಸದ್ಧಿಯಾಗಿರುವ ಮೋದಿ ಅವರು ತಮ್ಮ ದೇಶದ ಅಭಿವೃದ್ಧಿಗಾಗಿ ಜಗತ್ತಿನ ಎಲ್ಲ ರಾಷ್ಟ್ರಗಳನ್ನು ತಲುಪುತ್ತಿದ್ದು, ಭಾರತದ ಆರ್ಥಿಕಾಭಿವೃದ್ಧಿಗೆ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಸುಧಾರಾಣ ನೀತಿಗಳ ಮೂಲಕ ಸಮೃದ್ಧಿಯನ್ನು ಸ್ಥಾಪಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಚಟುವಟಿಕೆಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಗಳಿಗೆ ಪ್ರಥಮ ಆದ್ಯತೆಯನ್ನು ತಂದಂಥ ವ್ಯಕ್ತಿಯಾಗಿದ್ದಾರೆಂದು ಗ್ರೀಸ್ ತಿಳಿಸಿದೆ.

ಈ ಪ್ರಶಸ್ತಿಯನ್ನು 1975ರಲ್ಲಿ ಆರಂಭಿಸಲಾಯಿತು. ಪ್ರಶಸ್ತಿಯ ಸ್ಟಾರ್‌ನ ಒಂದು ಬದಿಯಲ್ಲಿ ಗ್ರೀಸ್ ದೇವತೆಯಾಗಿರುವ ಅಥೇನಾಳನ್ನು ಚಿತ್ರಿಸಲಾಗಿದ್ದು, ಮತ್ತೊಂದೆಡೆ ಸೂಕ್ತ ವ್ಯಕ್ತಿಗಳಿಗೆ ಮಾತ್ರವೇ ಗೌರವ ನೀಡಬೇಕು ಎಂದು ಬರೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!