ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ 36ನೆಯ ಅಧಿಪತಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಸನ್ಯಾಸ ಸ್ವೀಕಾರ ಸುವರ್ಣಮಹೋತ್ಸವ ಸಂಸ್ಮರಣಾರ್ಥ ದಕ್ಷಿಣ ಭಾರತದ ಪುಣ್ಯಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀಗೆ ಶೃಂಗೇರಿ ಶಾರದಾಪೀಠದ ವತಿಯಿಂದ ರೂ. 40 ಲಕ್ಷ ಮೌಲ್ಯದ ಸ್ವರ್ಣಪಾದುಕೆ ಹಾಗೂ ಒಡ್ಯಾಣವನ್ನು ಸಮರ್ಪಿಸಲಾಯಿತು.
ಶೃಂಗೇರಿಯಲ್ಲಿ ಉಭಯ ಜಗದ್ಗುರುಗಳು ಈ ಪಾದುಕೆ ಹಾಗೂ ಒಡ್ಯಾಣವನ್ನು ದೇವಳದ ಆನುವಂಶಿಕ ಅರ್ಚಕರಾದ ಶ್ರೀಹರಿನಾರಾಯಣದಾಸ ಆಸ್ರಣ್ಣರಿಗೆ ಹಸ್ತಾಂತರಿಸಿದರು.
ಜೂ. 19ರಂದು ಶ್ರೀದೇವಿಗೆ ತೊಡಿಸಿ ಅಲಂಕಾರ ಮಾಡಲಾಯಿತು. ಈ ಸೇವೆಯನ್ನು ಶೃಂಗೇರಿ ಶ್ರೀಮಠದ ಶಿಷ್ಯರಾದ ಆಂಧ್ರಪ್ರದೇಶದ ಶ್ರೀಪೋಲಿಸೆಟ್ಟಿ ಶ್ಯಾಮ್ ಸುಂದರ್ ಇವರು ನೀಡಿದ್ದಾರೆ.