ಭಾರತ ಎಂಟ್ರಿಗೆ ಗ್ರೀನ್ ಸಿಗ್ನಲ್: ಗೇಮ್ ಚೇಂಜರ್ ಆಗಲಿದೆಯೇ ಮಸ್ಕ್ ಒಡೆತನದ ಸ್ಟಾರ್‌ಲಿಂಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಉಪಗ್ರಹ ಆಧಾರಿತ ಅಂತರ್ಜಾಲ ಸೇವೆ ನೀಡಲು ಎಲೋನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ಗೆ ಪರವಾನಗಿ ಲಭಿಸಿದ್ದು, ಇದು ದೇಶದ ಅಂತರ್ಜಾಲ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.
ಸ್ಟಾರ್‌ಲಿಂಕ್, ಭಾರತದ ವಾಣಿಜ್ಯ ಕ್ಷೇತ್ರಕ್ಕೆ ಕಾಲಿಡಲು 2022ರಿಂದ ಸತತ ಪ್ರಯತ್ನ ನಡೆಸಿತ್ತು. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಸರ್ಕಾರ ಪರವಾನಿಗೆ ನೀಡಲು ಸಮಯಾವಕಾಶ ತೆಗೆದುಕೊಂಡಿತ್ತು. ಇದೀಗ ಪರವಾನಿಗೆ ನೀಡಲಾಗಿದ್ದು, ಸ್ಟಾರ್ ಲಿಂಕ್ ಭಾರತಕ್ಕೆ ಕಾಲಿಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.
ಈ ನಡುವೆ ದೂರಸಂಪರ್ಕ ಇಲಾಖೆಯಿಂದ ಯುಟೆಲ್‌ಸ್ಯಾಟ್‌ನ ಒನ್‌ವೆಬ್, ರಿಲಯನ್ಸ್‌ನ ಜಿಯೊ ಕೂಡಾ ಪರವಾನಗಿ ಪಡೆದುಕೊಂಡಿವೆ. ಪರವಾನಗಿ ಹಂಚಿಕೆ ಕುರಿತು ಜಿಯೊ ಮತ್ತು ಸ್ಟಾರ್‌ಲಿಂಕ್ ನಡುವೆ ಸಂಘರ್ಷ ನಡೆದಿತ್ತು. ತರಂಗಾಂತರವನ್ನು ಹಂಚಿಕೆ ಮಾಡಲಾಗುವುದೇ ಹೊರತು ಹರಾಜು ಮಾಡುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಇದೀಗ ಹೊಸ ಬೆಳವಣಿಗೆ ಇಂಟರ್ನೆಟ್ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಲಿದೆಯೇ ಎಂಬ ನಿರೀಕ್ಷೆ ಹುಟ್ಟುಹಾಕಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!