ಹೊಸದಿಗಂತ ಮಂಗಳೂರು
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾಡಳಿತ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯ ನಮ್ಮ ಭೂಮಿ ಸಂಸ್ಥೆ ಆವರಣದಲ್ಲಿಂದು ಔಷಧೀಯ ಗಿಡಗಳನ್ನು ನೆಡುವ ಮೂಲಕ ಹಸಿರು ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ.ಕಿರಣ್ ಕಾಂಚನ್, ಡಾ.ಕೆ.ಶಿಲ್ಪಾ, ಉಡುಪಿ ತಪೋವನದ ವೈದ್ಯೆ ವಾಣಿಶ್ರೀ ಐತಾಳ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪರಿಸರ ನೈರ್ಮಲ್ಯದ ಬಗ್ಗೆ ಅರಿವು, ಯೋಗ, ಪ್ರಾಣಾಯಾಮ, ವೈದ್ಯಕೀಯ ಸಲಹೆ ಮುಂತಾದ ಚಟುವಟಿಕೆಗಳು ನಡೆದವು.ದೂರದರ್ಶನದೊಂದಿಗೆ ವಿದ್ಯಾರ್ಥಿನಿ ಅರ್ಪಿತಾ ಭಟ್, ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಲು ಯೋಗಾಭ್ಯಾಸ ಪೂರಕವಾಗಿದೆ ಎಂಬ ಮಾಹಿತಿ ದೊರೆತಿದೆ ಎಂದರು.
ಡಾ.ಕಿರಣ್ ಕಾಂಚನ್, ಹಸಿರು ಯೋಗ ಪರಿಕಲ್ಪನೆಯಲ್ಲಿ ಔಷದೀಯ ಸಸಿಗಳನ್ನು ವಿತರಿಸಲಾಗಿದ್ದು, ಮಕ್ಕಳಿಗೆ ಅಗತ್ಯ ಅರಿವು ನೀಡಲಾಗಿದೆ. ಯೋಗ ಮತ್ತು ಪ್ರಾಣಾಯಾಮದ ಮಹತ್ವವನ್ನು ತಿಳಿಸಿಕೊಡಲಾಗಿದೆ ಎಂದು ಹೇಳಿದರು.