ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಗೃಹಜ್ಯೋತಿ ಯೋಜನೆ ಇಂದು ಮಧ್ಯರಾತ್ರಿಯಿಂದಲೇ ಆರಂಭವಾಗಲಿದೆ.
ಬಹುಸಮಯದಿಂದ ಜನರು ಯೋಜನೆಗಾಗಿ ಕಾಯುತ್ತಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಯೋಜನೆ ಜಾರಿಯಾಗಲಿದೆ. ಜುಲೈ ವಿದ್ಯುತ್ ಬಿಲ್ ಆಗಸ್ಟ್‌ಗೆ ಬರಲಿದೆ, ಬಿಲ್‌ನಲ್ಲಿ ಉಚಿತ ಬಿಲ್ ಎಂದು ಬರೆದಿರುವ ಸಾಧ್ಯತೆ ಇದೆ.
ಶಕ್ತಿ ಯೋಜನೆ ನಂತರ ಜನರು ಹೆಚ್ಚು ಉತ್ಸುಕರಾಗಿರುವುದು ಗೃಹಜ್ಯೋತಿ ಯೋಜನೆಗಾಗಿ. 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಲು ಗ್ರಾಹಕರು ಮುಗಿಬೀಳುತ್ತಿದ್ದು, ಅರ್ಜಿ ಸಲ್ಲಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಜೂ.18ರಿಂದಲೇ ಅರ್ಜಿ ಸಲ್ಲಿಕೆ ಆರಂಭಿಸಿದ್ದು, ಒಟ್ಟು2 ಕೋಟಿಗೂ ಹೆಚ್ಚು ಜನರು ಫಲಾನುಭವಿಗಳಾಗಿದ್ದಾರೆ. ಇದೀಗ 80 ಲಕ್ಷಕ್ಕೂ ಅಧಿಕ ಸರ್ಜಿ ಸಲ್ಲಿಕೆಯಾಗಿದೆ.