ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಹಣದ ಬಗ್ಗೆ ಗೃಹಿಣಿಯರಿಗೆ ಅಭಯ ನೀಡಿದ್ದರು. ಮಾರ್ಚ್ 31ರ ನಂತರ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಬರುತ್ತೆ ಅಂತ ಹೇಳಿದ್ದರು. ಇದೀಗ ಗೃಹಲಕ್ಷ್ಮಿ ಹಣದ ರಿಲೀಸ್ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಅಪ್ಡೇಟ್ಸ್ ನೀಡಿದ್ದಾರೆ.
ಈಗಾಗಲೇ ಒಂದು ತಿಂಗಳ ಗೃಹಲಕ್ಷ್ಮಿ ಹಣವನ್ನು ಟ್ರಿಜರಿಗೆ ಕಳುಹಿಸಲಾಗಿದೆ ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಯುಗಾದಿ ಮರುದಿನ ಜನವರಿ ತಿಂಗಳ ಹಣ ಬಿಡುಗಡೆ ಆಗುತ್ತೆ ಎಂದು ಹೇಳಿದ್ದಾರೆ.
1 ವರ್ಷದ ಅವಧಿಯಲ್ಲಿ ಹಾಲಿನ ದರ 9 ರೂಪಾಯಿ ಏರಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವೆ, ಹಾಲಿನ ದರದ ಬಗ್ಗೆ ರೈತರ ಸಂತೋಷ ಸುದ್ದಿ ಕೊಟ್ಟಿದ್ದೇವೆ. ಜಾಸ್ತಿ ಮಾಡಿರೋ ನಾಲ್ಕು ರೂಪಾಯಿ ಹಣ ರೈತರ ಖಾತೆಗೆ ನೇರವಾಗಿ ಹೋಗುತ್ತೆ ಎಂದು ಹೇಳಿದ್ದಾರೆ.