ದಿಗಂತ ವರದಿ ತಿಪಟೂರು:
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅತ್ತ ಗೃಹಲಕ್ಷ್ಮಿ ಹಣವೂ ಇಲ್ಲ ,ಇತ್ತ ವೃದ್ದಾಪ್ಯ ವೇತನವೂ ಇಲ್ಲದೇ
ವೃದ್ದೆಯೊಬ್ಬರು ತುತ್ತು ಅನ್ನಕ್ಕಾಗಿ ಅಲೆಯುವಂತಾಗಿದೆ.
ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದ ವಾಸಿ ಸುಮಾರು 80 ವರ್ಷ ವಯಸ್ಸಿನ ವೃದ್ದೆ ಹುಚ್ಚಮ್ಮ ಅಂಗವಿಕಲೆ, ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾರೆ. 3 ಜನ ಮಕ್ಕಳಿದ್ದರೂ ಸಾಕದೆ ಇರುವ ಕಾರಣ ವೃದ್ದೆ, ಪ್ರತ್ಯೇಕವಾಗಿ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ದುಡಿದು ತ್ತಿನ್ನಲು ಶಕ್ತಿಇಲ್ಲ, ಮಕ್ಕಳ ಆಸರೆಯೂ ಇಲ್ಲದೆ ಬದುಕು ಸಾಗಿಸುವ ಹುಚ್ಚಮ್ಮ ಅನ್ನಭಾಗ್ಯ ಪಡಿತರ ಧಾನ್ಯದಿಂದ ಜೀವನ ಸಾಗಿಸುತ್ತಿದ್ದಾರೆ.
ಆದರೇ ಅಧಿಕಾರಿಗಳ ಯಡವಟ್ಟಿನಿಂದ ಕಳೆದ ಒಂದುವರ್ಷದಿಂದ ವೃದ್ದಾಪ್ಯವೇತನ ,ಹಾಗೂ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಹಣಸಿಗದೆ ಪರದಾಡುವಂತ್ತಾಗಿದೆ. ವೃದ್ದೆ ಮಾತ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಲ್ಕುರಿಕೆ ಗ್ರಾಮಪಂಚಾಯ್ತಿ, ಪೋಸ್ಟ್ ಅಫಿಸ್,ಗೆ ಅಲೆದು ಅಲೆದು ಸಾಕಾಗಿ, ಹಣಬಾರದೇ , ಮನೆಮನೆಗೆ ಭಿಕ್ಷಾಟನೆ ಮಾಡುವಂತಾಗಿದೆ .
ಹತ್ತಾರು ಬಾರೀ ಕಚೇರಿಂದ ಕಚೇರಿಗೆ ಅಲೆದು ಅಧಿಕಾರಿಗಳನ್ನು ಸಂಪರ್ಕಿಸಿದರೆ ಯಾವುದೇ ಪ್ರಯೋಜನವಾಗಿಲ್ಲ, ಹಣಬಂದಿದೆಯ ಎಂದು ಅಂಚೆ ಕಚೇರಿಗೆ ಹೋದರೆ ಮಾನವೀಯತೆ ಮರೆತ ಅಂಚೆಕಚೇರಿ ಸಿಬ್ಬಂದಿ ಕಚೇರಿಯಿಂದ ಆಚೆ ಕಳುಹಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ. ಬಡವರಿಗೆ ವೃದ್ದರಿಗೆ ಸಹಾಯ ಮಾಡಬೇಕಾದ ಅಧಿಕಾರಿಗಳು ಕನಿಷ್ಠ ಮಾನವೀಯತೆ ಇಲ್ಲದೇ ವರ್ತಿಸುತ್ತಿರುವುದು ಸಾರ್ವಜನಿಕರ ಹಿಡಿಶಾಪಕ್ಕೆ ಕಾರಣವಾಗಿದ್ದು ತಾಲೂಕು ಆಡಳಿತ ವಯೋವೃದ್ದೆಗೆ ಸಹಾಯ ಮಾಡಬೇಕಾಗಿ ಹುಚ್ಚಮ್ಮ ಅವಲತ್ತುಕೊಂಡಿದ್ದಾರೆ.