ರಾಮಕೃಷ್ಣ ಸೇವಾಶ್ರಮದಿಂದ ಮೇವು ವಿತರಣಾ ಕಾರ್ಯಕ್ರಮ

ಹೊಸದಿಗಂತ ವರದಿ ತುಮಕೂರು: 

ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದರು ಇನ್ಫೋಸಿಸ್ ಫೌಂಡೇಷನ್ ಸಹಕಾರದಲ್ಲಿ ಈ ವರ್ಷವೂ ಪಾವಗಡ ತಾಲೂಕಿನ ಜಾನುವಾರುಗಳಿಗೆ ಮೇವು ವಿತರಿಸುವ ಕಾಯಕವನ್ನು ಕಳೆದ ವಾರದಿಂದ ಆರಂಭಿಸಿದ್ದಾರೆ.
ರಾಮಕೃಷ್ಣ ಆಶ್ರಮದ ಆವರಣದಲ್ಲಿ ಆರಂಭಿಸಲಾಗಿರುವ ಮೇವು ವಿತರಣಾ ಕೇಂದ್ರದತ್ತ ನೂರಾರು ರೈತರು ಹಾಗೂ ಗೋಪಾಲಕರು,  ರೈತಮಹಿಳೆಯರು ಆಗಮಿಸಿ ತಮ್ಮ ಜಾನುವಾರುಗಳಿಗೆ ಮೇವು ಪಡೆದುಕೊಂಡು ಹೋಗುತ್ತಿದ್ದಾರೆ.

ಮೇವು ವಿತರಣೆಯು ವ್ಯವಸ್ಥಿತವಾಗಿ ನಡೆಯಲು ಸಹಕಾರಿಯಾಗುವಂತೆ ರೈತರಿಗೆ ಒಂದು ಕಾರ್ಡ್ ನೀಡಲಾಗಿದ್ದು. ಸರದಿಯ ಆಧಾರದಲ್ಲಿ ರೈತರು ಬಂದು ಮೇವು ಪಡೆದು ಹೋಗುತ್ತಿದ್ದಾರೆ. ಪಳವಳ್ಳಿ, ರಾಜವಂತಿ, ರೊಪ್ಪ, ಕಣಿವೇನಹಳ್ಳಿ, ಪೋತಗಾನಹಳ್ಳಿ ಮುಂತಾದ ಗ್ರಾಮಗಳಿಂದ ಗೋಪಾಲಕರು ಹಾಗೂ ರೈತರು ಮೇವು ವಿತರಣಾ ಕೇಂದ್ರಕ್ಕೆ ಆಗಮಿಸಿ ಮೇವನ್ನು ಪಡೆಯುತ್ತಿರುವುದು ಅತ್ಯಂತ ಗಮನಾರ್ಹವಾದ ವಿಚಾರವಾಗಿದೆ.

ಆದಾಗ್ಯೂ ಮೇವಿನ ಬವಣೆ ಈ ರೀತಿ ಹೆಚ್ಚಾಗುವುದಕ್ಕೆ ಕಾರಣವೇನೆಂದರೆ ಪಾವಗಡದ ಸುತ್ತಮುತ್ತಲಿನ ನೂರಾರು ಗುಡ್ಡಗಳು, ಬೆಟ್ಟಗಳಿಗೆ ಸಮಾಜಘಾತುಕರು ಬೆಂಕಿಯನ್ನು ಹಚ್ಚುತ್ತಿರುವುದು ಈ ಒಂದು ದುರಿತಕ್ಕೆ ಕಾರಣವಾಗಿದೆ. ಇಂದು ದೂರದ ಹಳ್ಳಿಗಳಿಂದ ಬಂದ ರೈತಾಪಿ ಜನರು ತಮ್ಮ ಅಳಲನ್ನು ಸ್ವಾಮಿ ಜಪಾನಂದಜೀ ರವರೊಂದಿಗೆ ತೋಡಿಕೊಂಡಿದ್ದು ಹೀಗೆ. “ಅಲ್ಪಸ್ವಲ್ಪ ಮೇವು ಗುಡ್ಡಗಾಡುಗಳಲ್ಲಿ ದೊರಕುತ್ತಿದ್ದವು, ಆದರೆ ಕಿಡಿಗೇಡಿಗಳು ತಮ್ಮ ಅವಿವೇಕತನದಿಂದ ಈ ಗುಡ್ಡಗಳಿಗೆ ಬೆಂಕಿಯನ್ನು ಹಚ್ಚಿ ರೈತಾಪಿ ಜನರಿಗೆ ಈ ರೀತಿಯ ಆಘಾತವನ್ನುಉಂಟುಮಾಡಿದ್ದಾರೆ

ಸ್ವಾಮಿ ಜಪಾನಂದಜಿ ರವರು ತಮ್ಮ ಅನೇಕಾನೇಕ ಜವಾಬ್ಧಾರಿಯುತ ಕಾರ್ಯ ಯೋಜನೆಗಳ ಮಧ್ಯೆ 1985-86ರಿಂದ ಆರಂಭವಾದ ಗೋರಕ್ಷಣಾ ಯೋಜನೆ ಹಾಗೂ ಮೇವು ವಿತರಣಾ ಯೋಜನೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಇಲ್ಲಿಯ ರೈತರಿಗೆ ಆಶಾಕಿರಣವಾಗಿದೆ. ಇಂದು ದೂರದೂರದಿಂದ ಬಂದ ರೈತಾಪಿ ಜನರು ಸ್ವಾಮೀಜಿರವರಿಗೆ ಗೌರವ ಸಲ್ಲಿಸಿ ತಮ್ಮ ಭಕ್ತಿ ಶ್ರದ್ಧೆ ಮೂಲಕ ಆಪದ್ಭಾಂಧವ ಎಂದು ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ ಮೇವು ಪಡೆದು ಕೊಂಡು ಹೋಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸುಮಾರು 200ಕ್ಕೂ ಮಿಗಿಲಾದ ಗೋವುಗಳು, ಎಮ್ಮೆಗಳು ಹಾಗೂ ಕರುಗಳು ಪ್ರತಿದಿನ ಬೆಳಿಗ್ಗೆ ಆಸ್ಪತ್ರೆಯ ಮುಂದಿರುವ ಹಾಗೂ ಇತರ ಬಯಲು ಪ್ರದೇಶದಲ್ಲಿ ತಂಗಿ ಮೇವು ಮತ್ತು ಸಮೃದ್ಧಿಯಾದ ನೀರನ್ನು ಸೇವಿಸಿ ಮರಳುತ್ತಿರುವುದು ಮತ್ತೊಂದು ಈ ಭೀಕರ ಬಿಸಿಲಿನ ತಾಪದಲ್ಲಿ ಸೊರಗಿರುವ ಮೂಕಪ್ರಾಣಿಗಳಿಗೆ ಸ್ವಾಮಿ ಜಪಾನಂದರು ಆಶ್ರಯದಾತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!