ಹೊಸದಿಗಂತ, ಹುಬ್ಬಳ್ಳಿ:
ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಹಿಂಪಡೆಯುವುದು ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಈರಳ್ಳಿ ಬೆಳೆಗಾರರ ಸಂಘ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 30 ಲಕ್ಷ ಈರುಳ್ಳಿ ಬೆಳೆಗಾರರಿದ್ದಾರೆ. ಪ್ರತಿಯೊಂದು ಕ್ವಿಂಟಲ್ 18 ಖರ್ಚು ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ 12 ಬೆಲೆ ಇದೆ. ಇದರಿಂದ ಈರುಳ್ಳಿ ಬೆಳಗಾರರು ನಷ್ಟ ಅನುಭವಿಸುತ್ತಿದ್ದಾರೆ. ಇತ್ತೀಚಿಗೆ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಸಿದ್ದರಿಂದ ಈರುಳ್ಳಿ ಬೆಲೆ ಇನ್ನೂ ಕಡಿಮೆಯಾಗಲಿದೆ. ಆದ್ದರಿಂದ ಈರುಳ್ಳಿ ರಫ್ತು ನಿಷೇಧ ತಕ್ಷಣ ಹಿಂಪಡೆಯಬೇಕು ಎಂದರು.
ಈರುಳ್ಳಿ ಬೆಂಬಲ ಬೆಲೆ ನೀಡಬೇಕು, ಗದಗ, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಬೆಂಬಲ ಬೆಲೆ ಆರಂಭವಾಗಬೇಕು, ನಫೇಡ್ ಖರೀದಿ ಕೇಂದ್ರ ಸ್ಥಾಪಿಸಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಅತೀ ಹೆಚ್ಚು ಈರುಳ್ಳಿ ಬೆಳೆಯುವ ಗದಗದಲ್ಲಿ ಶೇಖರಣೆ ಘಟಕ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಸಂಘದ ಪದಾಕಾರಿಗಳಾದ ಲೋಕಣ್ಣಾ ಉಳ್ಳಾಗಡ್ಡಿ, ಈರಣ್ಣ ಕಾಳಗಿ, ಬಸವರಾಜ ಹಡಪದ, ಹನಮಂತಪ್ಪ ದುರ್ಗದ, ತಿಪ್ಪಣ್ಣ ಇದ್ದರು. ಈರುಳ್ಳಿ ಹಾರ ಧರಿಸಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.