ಸತತ ಐದನೇ ತಿಂಗಳು 1.30 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತಿದೆ ಎನ್ನುವ ನಡುವೆಯೂ ಕೇಂದ್ರ ಸರ್ಕಾರಕ್ಕೆ ಜಿಎಸ್ ಟಿ ಸಂತಸದ ಸುದ್ದಿ ನೀಡಿದೆ. ಸತತ ಐದನೇ ತಿಂಗಳು ಜಿಎಸ್‌ಟಿ ಸಂಗ್ರಹ 1.30 ಲಕ್ಷ ಕೋಟಿ ರೂ. ದಾಟಿದೆ.
2022ರ ಫೆಬ್ರವರಿ ತಿಂಗಳಿನಲ್ಲಿ 1,33,026 ಕೋಟಿ ರೂ. ಜಿಎಸ್‌ ಟಿ ಸಂಗ್ರಹವಾಗಿದೆ. ಇದು 2021ರ ಫ್ರೆಬ್ರವರಿಗಿಂತ ಶೇ.18ರಷ್ಟು ಏರಿಕೆಯಾಗಿದೆ.
ಒಟ್ಟಾರೆ ಸಿಜಿಎಸ್‌ಟಿ ಸಂಗ್ರಹ 24,435 ಕೋಟಿ ರೂ., ಎಸ್‌ಜಿಎಸ್‌ಟಿ ಸಂಗ್ರಹ 30,779 ಕೋಟಿ ರೂ., ಐಜಿಎಸ್‌ಟಿ ಸಂಗ್ರಹ 67,471 ಕೋಟಿ ಮತ್ತು ಸೆಸ್ 10,340 ಕೋಟಿ ರೂ ಸಂಗ್ರಹವಾಗಿದೆ.
ಕಳೆದ 5 ತಿಂಗಳಿನಲ್ಲಿ ಅಂದಾಜು 1,30,000 ಕೋಟಿ ರೂ. ದಾಟಿದೆ. 2021ರ ಅಕ್ಟೋಬರ್ ನಲ್ಲಿ 1,30,127 ಕೋಟಿ, ನವೆಂಬರ್ -1,31,526 ಕೋಟಿ ರೂ., ಡಿಸೆಂಬರ್ – 1,29,780 ಕೋಟಿ ರೂ., ಜನವರಿ 2022- 1,40,986 ಕೋಟಿ ರೂ., ಫೆಬ್ರವರಿ- 1,33,026 ಕೋಟಿ ರೂ. ಸಂಗ್ರಹವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!