ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅವರ ಭೇಟಿ ಮಾಡಿದ್ದು , ಇದಾದ ಬಳಿಕ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಜೆಡಿಎಸ್ ನಾಯಕ ಉತ್ತರ ನೀಡಿದ್ದಾರೆ .
ಬೆಂಗಳೂರಿನಲ್ಲಿ ಶಾಸಕ ಜಿಟಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ಭೇಟಿಯ ವೇಳೆ ಕಾಂಗ್ರೆಸ್ ಪಕ್ಷ ಸೇರಿ ಜೆಡಿಎಸ್ ಪಕ್ಷ ಹೊಡೆಯುವ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದೇನೆ ಎಂದರು.
ಸದಾಶಿವನ ನಗರದಲ್ಲಿ ಅವರೇ ನನ್ನನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಎಸ್ಟಿ ಸೋಮಶೇಖರ್ ಸೇರಿ ಹಲವರು ಇದ್ದರು. ಈ ಹಿಂದೆ ಪಕ್ಷಕ್ಕೆ ಕರೆದರೂ ಯಾಕೆ ಬರಲಿಲ್ಲ ಎಂದು ಕೇಳಿದರು ಅದೃಷ್ಟ ಇರುವವರಿಗೆ ಅಧಿಕಾರ ಸಿಗುತ್ತೆ ಇಲ್ಲ ಅಂದ್ರೆ ಸಿಗಲ್ಲ ಅಂತ ಹೇಳಿದೆ ಎಂದರು.
ನಾನು ಕಾಂಗ್ರೆಸ್ ಗೆ ಹೋಗು ಪರಿಸ್ಥಿತಿ ಇಲ್ಲ. ನಾನು ಕಾಂಗ್ರೆಸ್ ಗೆ ಬರಲ್ಲ ಅಂತ ಡಿಕೆ ಶಿವಕುಮಾರ್ ಗೆ ಸ್ಪಷ್ಟಪಡಿಸಿದ್ದೇನೆ.ಜೆಡಿಎಸ್ 19 ಶಾಸಕರು ಕೂಡ ಒಟ್ಟಾಗಿ ಇದ್ದೇವೆ ಯಾವುದೇ ರೀತಿಯಲ್ಲಿ ಪಕ್ಷವನ್ನು ಒಡೆಯುವ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಹೇಳಿದರು.