ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿ ಭದ್ರತಾ ಪಡೆ ಮತ್ತು ಭಾರತೀಯ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡ ಆರೋಪದ ಮೇಲೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಸಹದೇವ್ ಸಿಂಗ್ ಗೋಹಿಲ್ ಅವರನ್ನು ಬಂಧಿಸಿದೆ.
“ಗುಜರಾತ್ ಎಟಿಎಸ್ ಕಛ್‌ನ ಬಹುಪಯೋಗಿ ಆರೋಗ್ಯ ಕಾರ್ಯಕರ್ತ ಸಹದೇವ್ ಸಿಂಗ್ ಗೋಹಿಲ್ ಅವರನ್ನು ಬಂಧಿಸಿದೆ” ಎಂದು ಗುಜರಾತ್ ಎಟಿಎಸ್ ಎಸ್ಪಿ ಕೆ. ಸಿದ್ಧಾರ್ಥ್ ಹೇಳಿದರು.
ಆರೋಪಿಯು ಬಿಎಸ್‌ಎಫ್ ಮತ್ತು ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಮಾಹಿತಿಯನ್ನು ಪಾಕಿಸ್ತಾನಿ ಏಜೆಂಟ್‌ನೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂಬ ಮಾಹಿತಿ ನಮಗೆ ಸಿಕ್ಕಿತ್ತು ಆದರಿಂದ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.