ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತಮ್ಮ ಸಂಪುಟ ವಿಸ್ತರಣೆ ಮಾಡಿದ್ದು, ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶುಕ್ರವಾರ ಗಾಂಧಿನಗರದ ಮಹಾತ್ಮ ಮಂದಿರ ಸಮಾವೇಶ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಹರ್ಷ ಸಾಂಘವಿ ಹಾಗೂ ಸಂಪುಟದ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಸಂಪುಟ ವಿಸ್ತರಣೆಗೆ ಒಂದು ದಿನ ಮೊದಲು ಮುಖ್ಯಮಂತ್ರಿ ಪಟೇಲ್ ಹೊರತುಪಡಿಸಿ ಉಳಿದ ಎಲ್ಲ 16 ಸಚಿವರು ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ.
ಹರ್ಷ ಸಾಂಘವಿ ಅವರೊಂದಿಗೆ ಸಂಪುಟದ ನೂತನ ಸದಸ್ಯರಾಗಿರುವ ಸ್ವರೂಪ್ಜಿ ಠಾಕೂರ್, ಪ್ರವೀಣ್ ಕುಮಾರ್ ಮಾಲಿ, ರುಷಿಕೇಶ್ ಪಟೇಲ್, ದರ್ಶನ ವಾಘೇಲಾ, ಕುನ್ವರ್ಜಿ ಬವಾಲಿಯಾ, ರಿವಾಬಾ ಜಡೇಜಾ, ಅರ್ಜುನ್ ಮೋಧ್ವಾಡಿಯಾ, ಪರ್ಶೋತ್ತಮ್ ಸೋಲಂಕಿ, ಜಿತೇಂದ್ರ ವಾಘಾನಿ, ಪ್ರಫುಲ್ ಪನ್ಶೇರಿಯಾ ಮತ್ತು ಕನುಭಾಯಿ ದೇಸಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇದೀಗ ಖಾತೆ ಹಂಚಿಕೆಯು ನಡೆದಿದ್ದು, ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಪ್ರಮುಖ ಪೊಲೀಸ್, ವಸತಿ, ಜೈಲು, ಗಡಿ ಭದ್ರತೆ ಮತ್ತು ಇತರ ಖಾತೆಗಳನ್ನು ಪಡೆದರು.ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸಲಾಯಿತು.


ಗುಜರಾತ್‌ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಸಾಮಾನ್ಯ ಆಡಳಿತ, ಆಡಳಿತ ಸುಧಾರಣೆಗಳು ಮತ್ತು ತರಬೇತಿ, ಯೋಜನೆ, ಅನಿವಾಸಿ ಗುಜರಾತಿಗಳ ವಿಭಾಗ, ಕಂದಾಯ ಮತ್ತು ವಿಪತ್ತು ನಿರ್ವಹಣೆ ಮತ್ತು ರಸ್ತೆಗಳು, ಕಟ್ಟಡಗಳು ಮತ್ತು ರಾಜಧಾನಿ ಖಾತೆಗಳನ್ನು ಹೊಂದಿದ್ದಾರೆ. ಕನುಭಾಯಿ ಪಟೇಲ್ ಹಣಕಾಸು ಖಾತೆಯನ್ನು ತಮ್ಮದಾಗಿಸಿಕೊಂಡರು.