ಗುಜರಾತ್‌ ಸರ್ಕಾರದಿಂದ ಪ್ರಧಾನಿ ಮೋದಿ ಹೆಸರಲ್ಲಿ ಮೂರು ಯೋಜನೆಗಳು ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ ಸರ್ಕಾರವು (Gujarat Government) ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೆಸರಿನಲ್ಲಿ ಮೂರು ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಇಂದು ಹಣಕಾಸು ಸಚಿವ ಕನುಭಾಯಿ ದೇಸಾಯಿ ಅವರು 2024-25 ಹಣಕಾಸು ವರ್ಷದ ರಾಜ್ಯ ಬಜೆಟ್‌ ಮಂಡಿಸಿದರು. ಈ ವೇಳೆ ನಮೋ ಲಕ್ಷ್ಮಿ (NaMo Laxmi), ನಮೋ ಸರಸ್ವತಿ (NaMo Saraswati), ನಮೋ ಶ್ರೀ (NaMo Shri) ಹೆಸರಿನ ಮೂರು ಯೋಜನೆಗಳನ್ನು ಘೋಷಣೆ ಮಾಡಿದರು.

ನಮೋ ಲಕ್ಷ್ಮಿ
ಬಾಲಕಿಯರ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಈ ಯೋಜನೆ ಆರಂಭಿಸಲಾಗಿದೆ. ಈ ಯೋಜನೆಯ ಅಡಿ 9 ಮತ್ತು 10 ತರಗತಿಯಲ್ಲಿ ವರ್ಷಕ್ಕೆ 10 ಸಾವಿರ ರೂ. ನೀಡಿದರೆ 11 ಮತ್ತು 12ನೇ ತರಗತಿಯಲ್ಲಿ 15 ಸಾವಿರ ರೂ. ನೀಡಲಾಗುತ್ತದೆ. 12ನೇ ತರಗತಿ ಮುಗಿಯುವ ವೇಳೆ ಬಾಲಕಿಯೊಬ್ಬಳಿಗೆ ಒಟ್ಟು 50 ಸಾವಿರ ರೂ. ಸಿಗಲಿದೆ. 2024-25ರಲ್ಲಿ ಈ ಯೋಜನೆ ಜಾರಿಗೆ ಒಟ್ಟು 1,250 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ.

ನಮೋ ಸರಸ್ವತಿ
ಈ ಸ್ಕಾಲರ್‌ಶಿಪ್ ಯೋಜನೆಯಡಿಯಲ್ಲಿ, ಹೈಯರ್ ಸೆಕೆಂಡರಿ ಶಾಲೆಗಳಲ್ಲಿ (ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಂದ) ವಿಜ್ಞಾನ ವಿಭಾಗಕ್ಕೆ ಸೇರುವ ವಿದ್ಯಾರ್ಥಿಗಳಿಗೆ 11ನೇ ತರಗತಿಯಲ್ಲಿ ಓದುವಾಗ ವಾರ್ಷಿಕ 10,000 ಮತ್ತು 12 ನೇ ತರಗತಿಯಲ್ಲಿ ಓದುವಾಗ 15,000 ರೂ. ಸಹಾಯಧನ ನೀಡಲಾಗುತ್ತದೆ. ಇದನ್ನೂ ಓದಿ: ತಮ್ಮದೇ ಸ್ವಂತ ಪಕ್ಷ ಕಟ್ಟಿ ಪಾಲಿಟಿಕ್ಸ್‌ಗೆ ವಿಜಯ್ ಎಂಟ್ರಿ

ನಮೋ ಶ್ರೀ
ಯೋಜನೆಯಡಿ, SC, ST, NFSA ಮತ್ತು PM-JAY ಫಲಾನುಭವಿಗಳು ಸೇರಿದಂತೆ 11 ವರ್ಗಗಳಿಗೆ ಸೇರಿದ ಗರ್ಭಿಣಿಯರಿಗೆ 12,000 ರೂ. ಸಹಾಯವನ್ನು ನೀಡಲಾಗುತ್ತದೆ. ಈ ಯೋಜನೆಗೆ 2024-25ನೇ ಸಾಲಿನ ಬಜೆಟ್‌ನಲ್ಲಿ 750 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!