ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಪರ್ಜಾಯ್ ಚಂಡಮಾರುತ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್‌ನ ದ್ವಾರಕಾದಲ್ಲಿ 400 ಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ಗುರುತಿಸಲಾಗಿದ್ದು, ಜನರನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸಲಾಗುತ್ತಿದೆ.
“ದ್ವಾರಕಾ ಜಿಲ್ಲೆಯಲ್ಲಿ 400 ಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ಗುರುತಿಸಲಾಗಿದೆ ಮತ್ತು ಜನರನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಪ್ರಧಾನಮಂತ್ರಿ ಅವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರಿಂದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಹಾಗೆಯೇ ಅಲರ್ಟ್ ಮೋಡ್‌ನಲ್ಲಿರಲು ಮತ್ತು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು” ಎಂದು ಕೇಂದ್ರ ಸಚಿವ ಪರ್ಶೋತ್ತಮ್ ಹೇಳಿದ್ದಾರೆ.
ಭುಜ್‌ನ ಜಖೌ ಬಂದರಿನಲ್ಲಿ, ಚಂಡಮಾರುತದ ಹಿನ್ನೆಲೆಯಲ್ಲಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದರಿಂದ ಹೆಚ್ಚಿನ ಸಂಖ್ಯೆಯ ದೋಣಿಗಳನ್ನು ನಿಲ್ಲಿಸಲಾಗಿದೆ. ಜೂನ್ 15 ರ ಸಂಜೆಯ ವೇಳೆಗೆ ಚಂಡಮಾರುತವು ಗುಜರಾತ್‌ನ ಜಖೌ ಬಂದರು ದಾಟುವ ನಿರೀಕ್ಷೆಯಿದೆ.
ಗುಜರಾತ್‌ನ ಜಾಫ್ರಾಬಾದ್‌ನ ಶಿಯಾಲ್‌ಬೆಟ್ ಗ್ರಾಮಸ್ಥರಿಗೆ ಅಮ್ರೇಲಿ ಪೊಲೀಸರು ತರಕಾರಿಗಳು ಮತ್ತು ಹಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ತಲುಪಿಸಿದರು.
ಗುಜರಾತ್‌ನ ಜುನಾಗಢ್‌ನಲ್ಲಿ, ಕರಾವಳಿ ಪ್ರದೇಶದ ನಿವಾಸಿಗಳನ್ನು ಆಶ್ರಯಕ್ಕೆ ಸ್ಥಳಾಂತರಿಸಲಾಯಿತು.