ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಗುಜರಾತ್’ನ ‘ಗರ್ಬಾ ನೃತ್ಯ’: ಯುನೆಸ್ಕೋ ಘೋಷಣೆ

ಹೊಸದಿಗಂತ ಡಿಜಿಟಲ್‌ಡೆಸ್ಕ್:‌ 

ಗುಜರಾತ್‌ನ (Gujarat) ಸಾಂಪ್ರದಾಯಿಕ ಗರ್ಬಾ ನೃತ್ಯವನ್ನು (Garba Dance) ವಿಶ್ವ ಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಮೂರ್ತ ಪರಂಪರೆ ಎಂದು ಯುನೆಸ್ಕೋ ಘೋಷಣೆ ಮಾಡಿದೆ(Intangible Cultural Heritage).

ಈ ಕುರಿತು ಮಾಹಿತಿ ಹಂಚಿಕೊಂಡ ಯುನೆಸ್ಕೋ (UNESCO) , ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಹೊಸ ಸೇರ್ಪಡಣೆ; ಭಾರತದ ಗುಜರಾತ್ ನೃತ್ಯ ಗರ್ಬಾ ಅಭಿನಂದನೆಗಳು ಎಂದು ಹೇಳಿದೆ.

ಬೋಟ್ಸ್‌ವಾನಾದ ಕಸಾನೆಯಲ್ಲಿರುವ ಕ್ರೆಸ್ಟಾ ಮೊವಾನಾ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಇಂಟರ್‌ಗವರ್ನಮೆಂಟಲ್ ಕಮಿಟಿಯ 18 ನೇ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಅಧಿವೇಶನವು ಡಿಸೆಂಬರ್ 4ರಂದು ಆರಂಭವಾಗಿದ್ದು, ಡಿಸೆಂಬರ್ 9ರವರೆಗೂ ನಡೆಯಲಿದೆ ಎಂದು ಯುನೆಸ್ಕೋ ಹೇಳಿದೆ.

ಗರ್ಬಾ, ಹಿಂದು ಹಬ್ಬವಾದ ನವರಾತ್ರಿಯ ಸಂದರ್ಭದಲ್ಲಿ ನಡೆಸಲಾಗುವ ಧಾರ್ಮಿಕ ಮತ್ತು ಭಕ್ತಿಯ ನೃತ್ಯವಾಗಿದೆ.ಈ ನೃತ್ಯವು ಪದ್ಧತಿಯಾಗಿ, ಪ್ರದರ್ಶನ, ಅನುಕರಣೀಯ ಮತ್ತು ವೀಕ್ಷಣೆಯ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪೀಳಿಗೆಳಿಗೆ ಪ್ರಸರಣವಾಗುತ್ತಿದೆ ಎಂದು ಯುನೆಸ್ಕೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಗರ್ಬಾ ಮಾತ್ರವಲ್ಲದೇ, ಬಾಂಗ್ಲಾದೇಶದ ಚಿತ್ತಾರ ಹೊಂದಿರುವ ರಿಕ್ಷಾ, ಇಂಡೋನೇಷ್ಯಾದ ಜಾಮು ವೆಲೆನೆಸ್ ಕಲ್ಚರ್, ಥಾಯ್ಲೆಂಡ್‌ನ ಸಾಂಗಕ್ರನ್, ಸಾಂಪ್ರದಾಯಿಕ ಥಾಯಲ್ ಹೊಸ ವರ್ಷದಾಚರಣೆ ಕೂಡ ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಜಾಗ ಪಡೆದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!