ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿಯ ಪಾತಕಿ ಹಾಶಿಮ್ ಮೂಸಾ ಹತ್ಯೆ ಬೆನ್ನಲ್ಲೇ ಮತ್ತಿಬ್ಬರು ಉಗ್ರರನ್ನ ಸೇನೆ ಬೇಟೆಯಾಡಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರನ್ನ ಯೋಧರು ಹೊಡೆದುರುಳಿಸಿದ್ದಾರೆ.
ಹತ್ಯೆಯಾದ ಇಬ್ಬರು ಉಗ್ರರು ಕಾಶ್ಮೀರದ ಪೂಂಚ್ ಜಿಲ್ಲೆಯ ದೇಗ್ವಾರ್ ಸೆಕ್ಟರ್‌ನ ನಿಯಂತ್ರಣ ರೇಖೆಯ ಬಳಿ ಒಳನುಸುಳಲು ಯತ್ನಿಸಿದ್ದರು. ಭಾರೀ ಮಳೆ ನಡುವೆಯೂ ಮೂವರು ಪಿಓಕೆ ಕಡೆಯಿಂದ ಗಡಿ ದಾಟಲು ಯತ್ನಿಸಿದ್ದರು. ಪೂಂಚ್ ಪ್ರದೇಶದಲ್ಲಿ ಬೇಲಿಯ ಉದ್ದಕ್ಕೂ ಇಬ್ಬರು ಶಂಕಿತರ ಚಲನವಲನ ಪತ್ತೆಯಾಗಿತ್ತು. ಭದ್ರತಾ ಪಡೆಗಳ ಎಚ್ಚರಿಕೆ ಬಳಿಕವೂ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿದ ಭದ್ರತಾಪಡೆ ಉಗ್ರರನ್ನ ಹೊಡೆದುರುಳಿಸಿದೆ.