ಹೊಸದಿಗಂತ ವರದಿ ರಾಯಚೂರು :
ಗುರುಪೂರ್ಣಿಯ ಪ್ರಯುಕ್ತ ಮಂತ್ರಾಲಯ ಗುರು ರಾಘವೇಂದ್ರರ ದರ್ಶನಕ್ಕೆ ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು.
ಇಂದು ಗುರುಪೂರ್ಣಿವೆ ಇರುವ ಪ್ರಯುಕ್ತ ಒಂದುವರೆ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ ಫಲವಾಗಿ ರಾಘವೇಂದ್ರ ಸ್ವಾಮೀಜಿಗಳ ದರುಶನಕ್ಕೆ ಭಕ್ತರ ನೂಕುನುಗ್ಗಲನ್ನು ನಿಯಂತ್ರಿಸುವುದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಹರ ಸಾಹಸ ಪಡುತ್ತಿರುವವುದು ಡುಬಂದಿತು.
ಮಠದ ಪೀಠಾಧಿಪತಿಗಳಾದ ಸುಬುದೇಂದ್ರತೀರ್ಥ ಸ್ವಾಮೀಜಿ ರಾಘವೇಂದ್ರಸ್ವಾಮೀಜಿಯವರಿಗೆ ಪೂಜೆ ಸಲ್ಲಿಸಿ. ತುಳಸಿ ವನದಲ್ಲಿ ಕಲ್ಪವೃಕ್ಷವನ್ನು ನೆಟ್ಟು, ಗುರುಪೂರ್ಣಿಮೆ ಅಂಗವಾಗಿ ತುಳಸಿ ವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಬಸ್ ಸೌಲಭ್ಯವಿಲ್ಲದೆ ಮಂತ್ರಾಲಯಕ್ಕೆ ಹೋಗುವುದಕ್ಕೆ ಪರದಾಡುತ್ತಿರುವ ಭಕ್ತರು. ಗುರುವಾರ, ಶನಿವಾರ ಹಾಗೂ ಭಾನುವಾರಗಳಂದು ರಾಯಚೂರಿನದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಂತ್ರಾಕಯಕ್ಕೆ ತೆರಳುವರು. ಆದರೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ರಾಯಚೂರಿನಿಂದ ಬಸ್ಸುಗಳ ಸೌಲಭ್ಯವಿಲ್ಲದ ಕಾರಣಕ್ಕೆ ತೊಂದರೆ ಅನುಭವಿಸುವಂತೆ ಆಗುತ್ತಿದೆ.
ರಾಯಚೂರಿನಿಂದ ಗುರುವಾರ, ಶನಿವಾರ ಹಾಗೂ ಭಾನುವಾರಗಳಂದು ಮಂತ್ರಾಲಯಕ್ಕೆ ನೇರವಾಗಿ ನಾನ್ ಸ್ಟಾಪ್ ಬಸ್ಸುಗಳನ್ನು ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರೆ ಭಕ್ತರಿರಿಗೆ ಅನುಕೂಲವಾಗುತ್ತದೆ. ಆದರೆ ಈ ಮೂರು ದಿನಗಳಲ್ಲಿ ಸಾವಿರಾರು ಭಕ್ತರು ರಾಯಚೂರು ಬಸ್ ನಿಲ್ದಾಣದಲ್ಲಿ ನಿಂತಿರುತ್ತಿದ್ದರೂ ವ್ಯವಸ್ಥಾಪಕರು ಬಸ್ ಬಿಡುವುದಕ್ಕೆ ಮಂದಾಗದಿರುವುದರಿಂದ ಭಕ್ತರು ತೊಂದರೆಯನ್ನು ಅನುಭವಿಸುವಂತಾಗುತ್ತಿದೆ.
ಅಧಿಕಾರಿಗಳು ಹೆಚ್ಚಿನ ಬಸ್ ಸಂಚಾರ ವ್ಯವಸ್ಥೆಯನ್ನು ಮಾಡುವುದರತ್ತ ಹೆಚ್ಚಿನ ಗಮನಕೊಡಬೇಕು ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು.