ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಟೆಕ್ಸಾಸ್‌ನಲ್ಲಿ ಅರ್ಥಪೂರ್ಣ ಗುರುಪೂರ್ಣಿಮೆ ಆಚರಿಸಲಾಗಿದೆ.
10 ಸಾವಿರಕ್ಕೂ ಹೆಚ್ಚು ಮಂದಿ ಒಂದೇ ಸೂರಿನಡಿ ಕುಳಿತು ಭಗವದ್ಗೀತೆ ಪಠಿಸಿದ್ದಾರೆ. ಟೆಕ್ಸಾಸ್‌ನ ಅಲೆನ್ ಈಸ್ಟ್ ಸೆಂಟರ್‌ನಲ್ಲಿ ಈ ಭಕ್ತಿ ಮೇಳ ಜರುಗಿದೆ. ಎಲ್ಲ ವಯಸ್ಸಿನವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಪಾರಾಯಣ ಯಶಸ್ವಿಯಾಗಿ ನಡೆದಿದೆ.
ಯೋಗ ಸಂಗೀತ ಮತ್ತು ಎಸ್‌ಜಿಎಸ್ ಗೀತಾ ಫೌಂಡೇಷನ್ ಭಗವದ್ಗೀತಾ ಪಾರಾಯಣ ಆಯೋಜಿಸಿದ್ದು, ದೊಡ್ಡ ಮಟ್ಟಿಗಿನ ಯಶಸ್ಸು ಕಂಡಿದೆ. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಎಂಟು ವರ್ಷದಿಂದ ಭಗವದ್ಗೀತೆಯನ್ನು ಎಲ್ಲರೂ ಅಭ್ಯಸಿಸಿದ್ದು, ಕೆಲ ವರ್ಷಗಳಿಂದಲೂ ಕಾರ್ಯಕ್ರಮ ನಡೆಯುತ್ತಲೇ ಇದೆ.
https://twitter.com/PTI_News/status/1675900458794377216?s=20