ಕರುಳು ಹಿಂಡುವ ಘಟನೆ, ಮೊಮ್ಮಗನ ಶವ ನೋಡಿ ಅಜ್ಜನಿಗೂ ಹೃದಯಾಘಾತ, ಒಂದೇ ಕಡೆ ಅಂತ್ಯಸಂಸ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಧ್ಯಪ್ರದೇಶದ ಛತ್ತರ್​ಪುರ್ ಗ್ರಾಮದಲ್ಲಿ ಕರುಳು ಹಿಂಡುವ ಘಟನೆ ನಡೆದಿದೆ. ಮೊಮ್ಮಗನ ಶವ ಕಂಡ ಅಜ್ಜನಿಗೆ ಹೃದಯಾಘಾತವಾಗಿದ್ದು, ಕುಟುಂಬದವರು ಇಬ್ಬರ ಅಂತ್ಯಕ್ರಿಯೆಯನ್ನೂ ಒಟ್ಟಿಗೇ ಮಾಡಿದ್ದಾರೆ.
ಬಡಮಲ್ಹಾರದ ವಾರ್ಡ್ 11ರ ನಿವಾಸಿ ಪವನ್‌ ಜೈನ್‌ ಎನ್ನುವವರು ಮನೆಯ ಹಿಂದಿನ ಗೋದಾಮಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲಬಾಧೆಯಿಂದ ಬೇಸತ್ತ ಪವನ್‌ ಆತ್ಮಹತ್ಯೆಗೆ ಶರಣಾಗಿದ್ದು, ಪವನ್‌ ಮೃತದೇಹವನ್ನು ನೋಡುತ್ತಿದ್ದಂತೆಯೇ ಅವರ ಅಜ್ಜ ಕುಸಿದು ಬಿದ್ದಿದ್ದಾರೆ. ಅಲ್ಲಿದ್ದವರು ಅವರನ್ನು ಎತ್ತಿ ಕೂರಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅಲ್ಲಿ ವೈದ್ಯರು ಸಾವನ್ನಪ್ಪಿದ್ದಾಗಿ ಘೋಷಿಸಿದ್ದಾರೆ. ವೈದ್ಯರ ಪ್ರಕಾರ ಆ ಆಘಾತವನ್ನು ತಾಳಲಾರದೆ ಅವರಿಗೆ ಹೃದಯಾಘಾತವಾಗಿದೆ.

ಶೋಧದ ವೇಳೆ ಪೊಲೀಸರು ಪತ್ರವನ್ನೂ ವಶಪಡಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಪತ್ರದಲ್ಲಿ ಬರೆದಿರುವ ವಿಷಯಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!