ಸಿಎಂ ಯೋಗಿ ಕಚೇರಿಯ ಟ್ವಿಟರ್ ಹ್ಯಾಕ್ ಬೆನ್ನಲ್ಲೇ ಯುಪಿ ಸರ್ಕಾರದ ಟ್ವಿಟರ್​ ಖಾತೆ ಮೇಲೂ ಕಣ್ಣು ಹಾಕಿದ ಹ್ಯಾಕರ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿಯ (@CMOfficeUP) ಟ್ವಿಟರ್ ಹ್ಯಾಂಡಲ್ ಹ್ಯಾಕ್ ಎಡಿಎ ಬೆನ್ನಲ್ಲೇ ಇದೀಗ 48 ಗಂಟೆಗಳ ನಂತರ ಯುಪಿ ಸರ್ಕಾರದ @UPGovt ಟ್ವಿಟರ್ ಹ್ಯಾಂಡಲ್ ಕೂಡ ಹ್ಯಾಕ್ ಆಗಿದೆ. ಹ್ಯಾಕ್ ಆದ ಕೆಲವೇ ಸಮಯದಲ್ಲಿ 30 ಕ್ಕೂ ಹೆಚ್ಚು ನಕಲಿ ಟ್ವೀಟ್‌ಗಳನ್ನು ಸಹ ಮಾಡಲಾಗಿದೆ.ಹ್ಯಾಕರ್‌ಗಳು ಟ್ವಿಟರ್ ಖಾತೆಯ ಡಿಪಿಯನ್ನು ಕಾರ್ಟೂನ್‌ಗೆ ಬದಲಾಯಿಸಿದ್ದಾರೆ. ಜೊತೆಗೆ ಖಾತೆಯನ್ನೂ ಮರುಸ್ಥಾಪಿಸಲಾಗಿದೆ. ಸಿಎಂ ಕಚೇರಿಯ ಟ್ವಿಟರ್ ಖಾತೆ ಹ್ಯಾಕಿಂಗ್ ಪ್ರಕರಣದ ತನಿಖೆ ನಡೆಯುತ್ತಲೇ ಇದ್ದು, ಇದರ ಹಿಂದೆ ಯಾರಿದ್ದಾರೆನ್ನುವ ಬಗ್ಗೆ ಪತ್ತೆ ಕಾರ್ಯ ನಡೆಯುತ್ತದೆ
ಹ್ಯಾಕರ್ ತನ್ನನ್ನು @Azukiofficialನ ಸಹ-ಸಂಸ್ಥಾಪಕ ಎಂದು ಹೇಳಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಸೈಬರ್ ಯು.ಪಿ. ತ್ರಿವೇಣಿ ಸಿಂಗ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿಯ @CMOfficeUP ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಏಪ್ರಿಲ್ 8ರ ತಡರಾತ್ರಿ 12.40ಕ್ಕೆ ಹ್ಯಾಕ್ ಮಾಡಲಾಗಿದೆ. ಹ್ಯಾಕರ್‌ಗಳು ತಮ್ಮನ್ನು @BoredApeYC ಮತ್ತು @yugalabsನ ಸಹ-ಸಂಸ್ಥಾಪಕರು ಎಂದು ಬಯೋದಲ್ಲಿ ವಿವರಿಸಿಕೊಂಡಿದ್ದಾರೆ.ಈ ಎರಡೂ ಕಂಪನಿಗಳು ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!