ನಾನು ಮನೆಯಲ್ಲಿ ಇದ್ದಿದ್ರೆ, ಅಮ್ಮನ ಜೀವ ಉಳಿಯುತ್ತಿತ್ತು: ವಿನೋದ್ ರಾಜ್ ಕಣ್ಣೀರು

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹಿರಿಯ ನಟಿ ಲೀಲಾವತಿ ನಿಧನಕ್ಕೆ ಮಗ ವಿನೋದ್ ರಾಜ್‌ ಭಾವುಕರಾಗಿದ್ದು, ನಾನು ಮನೆಯಲ್ಲಿ ಇದ್ದಿದ್ರೆ, ಅಮ್ಮನ ಜೀವ ಉಳಿಯುತ್ತಿತ್ತು ಎಂದು ತಾಯಿಕ್ಕೆ ಕಣ್ಣೀರಿಟ್ಟಿದ್ದಾರೆ.

ಅವರ ಸಾವು ಒಪ್ಪಿಕೊಳ್ಳೋಕೆ ಕಷ್ಟ ಆಗ್ತಿದೆ. ಕಷ್ಟಪಟ್ಟು ಬೆಳೆದಿರೋ ಜೀವ ಅದು, ನನಗೆ 56 ವರ್ಷ ಆದ್ರೂ ಅವರ ಸಾವು ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಅಮ್ಮನಿಗೆ ಆಸ್ಪತ್ರೆ ಕಟ್ಟಿಸಬೇಕು ಅಂತ ಆಸೆಯಿತ್ತು. ಅಲ್ಲಿಯವರೆಗೂ ಬದುಕಿದ್ದಾರೆ. ನಾಲ್ಕು ಸಲ ಅಮ್ಮ ವಿನೋದ್ ಅಂತ ಹೇಳಿದ್ದಾರೆ. ನಾನು ಬರೋವಷ್ಟರಲ್ಲಿ ಅವರಿಲ್ಲ. ಅವರು ಅಲ್ಲಿ ಮಲ್ಕೊಂಡಿದ್ದಾರೆ. ಮತ್ತೆಂದೂ ಅವರನ್ನ ನೋಡೋಕೆ ಆಗಲ್ಲ. ಕಡೆಯದಾಗಿ ಅವರು ನನ್ನ ಹೆಸರು ಹೇಳಿದ್ದಾರೆ. ನಾನು ಇದ್ದಿದ್ರೆ ಅವರು ಹೋಗುತ್ತಿರಲಿಲ್ಲ. ಅಮ್ಮನ ಜೀವ ಉಳಿಯುತ್ತಿತ್ತು ಎಂದು ಭಾವುಕರಾಗಿದ್ದಾರೆ.

ನಾಳೆ (ಡಿ.9) ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ದಯವಿಟ್ಟು ಸಾರ್ವಜನಿಕರು ಸಹಕರಿಸಿ. ಎಲ್ಲರಿಗೂ ಅವರ ಅಂತಿಮ ದರ್ಶನ ಸಿಗುವಂತೆ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!