Hair and Skin Care | ಸ್ನಾನದ ನಂತರ ಈ ತಪ್ಪುಗಳನ್ನು ಮಾಡಬೇಡಿ! ನಿಮ್ಮ ಕೂದಲು, ಸೌಂದರ್ಯ ಎಲ್ಲವನ್ನೂ ಹಾಳು ಮಾಡುತ್ತದೆ

ಸ್ನಾನದಿಂದ ಶುದ್ಧತೆಯಷ್ಟೇ ಅಲ್ಲ, ದೈಹಿಕ ಆರೋಗ್ಯಕ್ಕೂ ಸಂಬಂಧವಿದೆ. ಆದರೆ, ಸ್ನಾನದ ನಂತರ ಕೆಲವೊಂದು ತಪ್ಪುಗಳನ್ನು ನಾವು ಮಾಡುತ್ತೇವೆ ಅವು ನಮ್ಮ ಕೂದಲು, ಚರ್ಮ ಮತ್ತು ಒಟ್ಟಾರೆಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ.

ಕೂದಲನ್ನು ಗಟ್ಟಿಯಾಗಿ ಟವಲ್‌ನಿಂದ ಉಜ್ಜುವುದು
ಬಹುತೆಕ ಜನ ಸ್ನಾನದ ನಂತರ ಕೂದಲನ್ನು ಬೇಗ ಒಣಗಿಸಲು ಟವಲ್‌ನಿಂದ ಗಟ್ಟಿಯಾಗಿ ಉಜ್ಜುತ್ತಾರೆ. ಆದರೆ ಈ ಕ್ರಮ ಕೂದಲನ್ನು ದುರ್ಬಲಗೊಳಿಸಿ, ಉದುರಿಕೆಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ಟವಲ್‌ನ ಗಟ್ಟಿತನದಿಂದ ಕೂದಲಿನ ತುದಿಗಳು ಸೀಳುತ್ತವೆ ಹಾಗೂ ಹೊಳಪೂ ಕಳೆದುಕೊಳ್ಳುತ್ತದೆ.

ಏನು ಮಾಡಬೇಕು:
ಮೈಕ್ರೋಫೈಬರ್ ಟವಲ್ ಬಳಸುವುದು ಉತ್ತಮ. ನಿಧಾನವಾಗಿ ಒರೆಸುವ ಮೂಲಕ ಅಥವಾ ಹಗುರವಾದ ಶಾಖದಲ್ಲಿ ಹೇರ್ ಡ್ರೈಯರ್ ಬಳಸಿ.

Woman bathing and washing her hair relaxed. Woman bathing and washing her hair relaxed. HAIR WASH stock pictures, royalty-free photos & images

ಕೂದಲನ್ನು ಒದ್ದೆಯೇ ಬನ್‌ನಲ್ಲಿ ಕಟ್ಟುವುದು
ತಲೆಯ ಕೂದಲು ಒದ್ದೆಯಾದ ಸ್ಥಿತಿಯಲ್ಲಿ ಅವುಗಳನ್ನು ಬನ್‌ನಲ್ಲಿ ಕಟ್ಟುವುದು ಶಿಲೀಂಧ್ರ ಸೋಂಕು, ತಲೆಹೊಟ್ಟಿಗೆ ಕಾರಣವಾಗುತ್ತದೆ. ಮತ್ತು ಕೂದಲಿನ ನಾಜೂಕು ಕಡಿಮೆಯಾಗುವ ಅಪಾಯಗಳನ್ನುಂಟುಮಾಡುತ್ತದೆ.

ಏನು ಮಾಡಬೇಕು:
ಕೂದಲು ಪೂರ್ಣವಾಗಿ ಒಣಗಿಸಿದ ನಂತರ ಮಾತ್ರ ಕೂದಲು ಕಟ್ಟಿಕೊಳ್ಳಿ. ಬೇಕಾದರೆ ಟವಲ್ ಅಥವಾ ಹೇರ್ ಡ್ರೈಯರ್‌ನ ಸಹಾಯ ಪಡೆಯಿರಿ.

Young Woman hair care, stock photo India, hair care, hair oil, adult, adults only wet hair woman stock pictures, royalty-free photos & images

ಒದ್ದೆಯಾದ ಚರ್ಮದ ಮೇಲೆ ಬಟ್ಟೆ ಧರಿಸುವುದು
ಚರ್ಮವನ್ನು ಚೆನ್ನಾಗಿ ಒಣಗಿಸದೇ ಬಟ್ಟೆ ಧರಿಸುವುದು ಶಿಲೀಂಧ್ರ ಸೋಂಕು, ತುರಿಕೆ, ದದ್ದುಗಳಿಗೆ ಕಾರಣವಾಗಬಹುದು. ತೇವಾಂಶವುಳ್ಳ ಪ್ರದೇಶಗಳಲ್ಲಿ ಬ್ಯಾಕ್ಟೀರಿಯಾ ಹೆಚ್ಚು ವೃದ್ಧಿಯಾಗುತ್ತವೆ.

ಏನು ಮಾಡಬೇಕು:
ಕಂಕುಳು, ತೊಡೆಯ ನಡುವಿನ ಭಾಗಗಳು ಸೇರಿದಂತೆ ದೇಹದ ಎಲ್ಲಾ ಭಾಗಗಳನ್ನು ಒಣಗಿಸಿ ನಂತರ ಬಟ್ಟೆ ಧರಿಸಿ.

Woman taking shower, with focus on her back and shoulders. Close-up of her skin and water drops. Close-up of a woman taking shower in a bathroom. wet skin stock pictures, royalty-free photos & images

ಮಾಯಿಶ್ಚರೈಸರ್ ಹಚ್ಚದೆ ಬಿಡುವುದು
ಸ್ನಾನದ ನಂತರ ಚರ್ಮದ ರಂಧ್ರಗಳು ತೆರೆಯಲ್ಪಟ್ಟಿರುತ್ತವೆ. ಈ ಸಮಯದಲ್ಲಿ ತಕ್ಷಣ ಮಾಯಿಶ್ಚರೈಸರ್ ಹಚ್ಚದಿದ್ದರೆ, ಚರ್ಮ ಒಣಗಿ ಮೃದುತೆಯನ್ನು ಕಳೆದುಕೊಳ್ಳುತ್ತದೆ.

ಏನು ಮಾಡಬೇಕು:
ಸ್ನಾನದ 2–3 ನಿಮಿಷಗಳಲ್ಲಿ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಹಚ್ಚಿ. ಇದು ತೇವಾಂಶವನ್ನು ಲಾಕ್ ಮಾಡುತ್ತದೆ.

A woman applying hand lotion onto her hands closeup of female hands applying hand cream apply moisturizer stock pictures, royalty-free photos & images

ಒದ್ದೆಯಾದ ಚರ್ಮಕ್ಕೆ ಡಿಯೋಡರೆಂಟ್ ಬಳಸುವುದು
ಒದ್ದೆಯಾದ ಚರ್ಮದ ಮೇಲೆ ಡಿಯೋಡರೆಂಟ್ ಹಚ್ಚುವುದು ಅಲರ್ಜಿ, ಕಿರಿಕಿರಿ, ಉಂಟುಮಾಡಬಹುದು.

ಏನು ಮಾಡಬೇಕು:
ಡಿಯೋಡರೆಂಟ್ ಬಳಸುವ ಮುನ್ನ ಚರ್ಮವನ್ನು ಸಂಪೂರ್ಣವಾಗಿ ಒಣಗಿಸಿ. ಒಣ ಚರ್ಮದ ಮೇಲೆ ಮಾತ್ರ ಬಳಸುವುದು ಸುರಕ್ಷಿತ.

Young lady wrapped in white towel apply antiperspirant in armpit Young lady wrapped in white towel raise arm apply antiperspirant in armpit, woman use underarm deodorant stick for daily hygiene everyday freshness, hyperhidrosis treatment concept close up rear view apply deodorant stock pictures, royalty-free photos & images

ಈ ಲೇಖನವು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಚರ್ಮ ಸಂಬಂಧಿತ ಸಮಸ್ಯೆಗೆ ತಜ್ಞರ ಸಲಹೆ ಅನಿವಾರ್ಯ. ಇಲ್ಲಿ ನೀಡಿರುವ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!