ಇತ್ತೀಚಿನ ದಿನಗಳಲ್ಲಿ ಅನೇಕರು ಕೂದಲು ಉದುರುವಿಕೆ, ತಲೆಚರ್ಮದ ತುರಿಕೆ, ಬಿಳಿ ಕೂದಲು, ಡ್ರೈನೆಸ್ ಮತ್ತು ತಲೆಹೊಟ್ಟು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವೊಂದು ನಿಮ್ಮ ಅಡಿಗೆಮನೆಯಲ್ಲಿಯೇ ಲಭ್ಯವಿದೆ. ಮಜ್ಜಿಗೆಯಿಂದ ತಲೆ ತೊಳೆಯುವುದು ಕೂಡ ಕೂದಲಿನ ಆರೈಕೆಗಾಗಿ ಅತ್ಯಂತ ಪರಿಣಾಮಕಾರಿಯಾದ ವಿಧಾನವಾಗಿದೆ. ಮೊಸರಿನಿಂದ ತಯಾರಾಗುವ ಮಜ್ಜಿಗೆಯು ಲ್ಯಾಕ್ಟಿಕ್ ಆಮ್ಲ, ಪ್ರೋಟೀನ್ ಮತ್ತು ಕೊಬ್ಬಿನಿಂದ ಸಮೃದ್ಧವಾಗಿರುತ್ತದೆ.
ಕೂದಲು ಉದುರುವಿಕೆಗೆ ಮಜ್ಜಿಗೆ ಚಿಕಿತ್ಸೆ
ಮಜ್ಜಿಗೆಯಲ್ಲಿರುವ ಪೋಷಕಾಂಶಗಳು ಕೂದಲಿನ ಬೇರುಗಳನ್ನು ಬಲಪಡಿಸಿ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತವೆ. ನಿಯಮಿತವಾಗಿ ಮಜ್ಜಿಗೆಯಿಂದ ತಲೆ ತೊಳೆಯುವುದರಿಂದ ಈ ಸಮಸ್ಯೆಗೆ ಉತ್ತಮ ಪರಿಹಾರ ಸಿಗಬಹುದು.
ದಟ್ಟ ಕೂದಲಿಗೆ ಉತ್ತೇಜನೆ ನೀಡುತ್ತದೆ
ಮಜ್ಜಿಗೆ ತಲೆಚರ್ಮದಲ್ಲಿ ರಕ್ತಪ್ರವಾಹವನ್ನು ಉತ್ತೇಜಿಸುತ್ತಿದ್ದು, ಆರೋಗ್ಯಕರ ಕೂದಲು ಬೆಳವಣಿಗೆಗೆ ಸಹಾಯಕವಾಗುತ್ತದೆ. ಇದು ಕೂದಲನ್ನು ದಟ್ಟವಾಗಿ ಬೆಳೆಯಲು ನೆರವಾಗುತ್ತದೆ.
ತಲೆಹೊಟ್ಟಿಗೆ ನೈಸರ್ಗಿಕ ಪರಿಹಾರ
ಮಜ್ಜಿಗೆಯಲ್ಲಿರುವ ಆಮ್ಲಗಳು ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳ ಮೇಲೆ ಪರಿಣಾಮ ಬೀರುವುದರಿಂದ ತಲೆಚರ್ಮದ ತುರಿಕೆ ಮತ್ತು ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ.
ಕೂದಲು ಮೃದುವಾಗಿಸಿ ಹೊಳಪು ನೀಡುತ್ತದೆ
ಲ್ಯಾಕ್ಟಿಕ್ ಆಮ್ಲ ಕೂದಲಿನ ಸತ್ತ ಚರ್ಮವನ್ನು ತೆಗೆದುಹಾಕುವುದರಿಂದ ಕೂದಲು ಮೃದುವಾಗುತ್ತದೆ.
ಕೂದಲಿಗೆ ತೇವಾಂಶ ನೀಡುತ್ತದೆ
ಮಜ್ಜಿಗೆಯ ತೇವಾಂಶ ಕೂದಲನ್ನು ಒಣಗದಂತೆ ತಡೆದು, ಸ್ವಾಭಾವಿಕವಾಗಿ ತೇವಾಂಶವನ್ನು ಕಾಪಾಡುತ್ತದೆ. ಇದು ಒಣ ಕೂದಲಿಗೆ ಉತ್ತಮ.
ಮಜ್ಜಿಗೆಯನ್ನು ನೇರವಾಗಿ ತಲೆಚರ್ಮಕ್ಕೆ ಹಚ್ಚಿ, 15-20 ನಿಮಿಷ ಬಿಡಿ. ನಂತರ ಸ್ನಾನ ಮಾಡಿದರೆ ಉತ್ತಮ. ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಪಾಲಿಸಿದರೆ, ಕೂದಲು ಸಂಬಂಧಿತ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.