ಸ್ನಾನ ಮಾಡಿ ಬಂದ ತಕ್ಷಣ ಮಾಡೋ ಕೆಲಸ, ಮೊಬೈಲ್ ನೋಡೋದು ಅಥವಾ ಸುಸ್ತಾಗಿರೋದ್ರಿಂದ “ಸ್ವಲ್ಪ ಹೊತ್ತಲ್ಲೇ ಒಣಗುತ್ತೆ” ಅಂತ ಒದ್ದೆ ಕೂದಲಿನಲ್ಲೇ ಮಲಗೋ ಅಭ್ಯಾಸ ಹಲವರಿಗೆ ಇರುತ್ತೆ. ಆದರೆ ಈ ಸಣ್ಣ ನಿರ್ಲಕ್ಷ್ಯವೇ ನಿಧಾನವಾಗಿ ದೊಡ್ಡ ಹೇರ್ ಪ್ರಾಬ್ಲಂಗೆ ಕಾರಣವಾಗಬಹುದು ಅನ್ನೋದು ಗೊತ್ತಾ? ಕೂದಲು ಒದ್ದೆಯಾಗಿರುವಾಗ ಅತಿ ನಾಜೂಕಾಗಿರುತ್ತದೆ. ಆ ಸಮಯದಲ್ಲಿ ತಲೆಗೆ ಒತ್ತಡ ಬಿದ್ದರೆ, ತೇವಾಂಶ ಸಿಲುಕಿಕೊಂಡರೆ ಸಮಸ್ಯೆಗಳು ಶುರುವಾಗುತ್ತವೆ.
- ಒದ್ದೆ ಕೂದಲು ಸುಲಭವಾಗಿ ಮುರಿಯುತ್ತದೆ. ಮಲಗುವಾಗ ತಲೆಗೆ ಆಗುವ ಒತ್ತಡದಿಂದ ಕೂದಲು ಬೇರುಗಳು ದುರ್ಬಲವಾಗಿ, ಹೇರ್ ಫಾಲ್ ಹೆಚ್ಚಾಗಬಹುದು.
- ಒದ್ದೆಯಾದ ತಲೆಚರ್ಮ ಫಂಗಸ್ ಬೆಳೆಯಲು ಸೂಕ್ತ ವಾತಾವರಣ. ಇದರಿಂದ ಡ್ಯಾಂಡ್ರಫ್, ತಲೆಕುರಿ, ತುರಿಕೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
- ರಾತ್ರಿ ತುಂಬಾ ತೇವಾಂಶ ತಲೆಯಲ್ಲೇ ಉಳಿದರೆ, ಬೆಳಿಗ್ಗೆ ಎದ್ದಾಗ ತಲೆನೋವು, ಭಾರವಾದ ಅನುಭವ, ಕೆಲವೊಮ್ಮೆ ಸೈನಸ್ ಸಮಸ್ಯೆಯೂ ಕಾಡಬಹುದು.
- ಒದ್ದೆ ಕೂದಲಿನಲ್ಲೇ ಮಲಗುವುದರಿಂದ ನ್ಯಾಚುರಲ್ ಆಯಿಲ್ ಬ್ಯಾಲೆನ್ಸ್ ಹಾಳಾಗುತ್ತದೆ. ಪರಿಣಾಮ ಕೂದಲು ಒಣ, ರಫ್ ಮತ್ತು ಫ್ರಿಜಿಯಾಗುತ್ತದೆ.
- ತಲೆ ತೇವಾಂಶದಿಂದ ಕಿರಿಕಿರಿ ಉಂಟಾಗಿ, ನಿದ್ರೆ ಸರಿಯಾಗಿ ಬರದಿರುವ ಸಾಧ್ಯತೆ ಇದೆ. ಇದು ದೇಹದ ಒಟ್ಟಾರೆ ಆರೋಗ್ಯಕ್ಕೂ ಪ್ರಭಾವ ಬೀರುತ್ತದೆ.
ಏನು ಮಾಡಬೇಕು?
ಸ್ನಾನ ಮಾಡಿದ ನಂತರ ಕೂದಲನ್ನು ಕನಿಷ್ಠ 70–80% ಒಣಗಿಸಿಕೊಂಡೇ ಮಲಗುವ ಅಭ್ಯಾಸ ಬೆಳೆಸಿಕೊಳ್ಳಿ. ಸಾಧ್ಯವಾದರೆ ಟವಲ್‌ನಿಂದ ಸೌಮ್ಯವಾಗಿ ಒರೆಸಿ ಅಥವಾ ಕೂಲ್ ಮೋಡ್‌ನಲ್ಲಿ ಹೇರ್ ಡ್ರೈಯರ್ ಬಳಸಿ. ವಾರಕ್ಕೆ ಒಮ್ಮೆ ತಲೆಚರ್ಮಕ್ಕೆ ಎಣ್ಣೆ ಮಸಾಜ್ ಮಾಡುವುದು ಸಹ ಉಪಕಾರಿಯಾಗುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)


