ಇಂದಿನ ಒತ್ತಡದ ಜೀವನಶೈಲಿ, ಆಹಾರ ಸೇವನೆ ಹಾಗೂ ಮಾಲಿನ್ಯದ ಪರಿಣಾಮವಾಗಿ ಕೂದಲು ಉದುರುವಿಕೆ (Hair Fall) ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಈ ಸಮಸ್ಯೆಗೆ ಬೆಲೆಬಾಳುವ ಕ್ರೀಮ್ಗಳು ಅಥವಾ ಚಿಕಿತ್ಸೆಗಿಂತ ಹೆಚ್ಚಿನ ಪರಿಹಾರ ನೈಸರ್ಗಿಕ ಆಹಾರಗಳಲ್ಲಿಯೇ ಲಭ್ಯ. ತಜ್ಞರು ಸಲಹೆ ನೀಡುವ ಕೆಲ ನೈಸರ್ಗಿಕ ಆಹಾರಗಳ ಸೇವನೆಯಿಂದ ಕೂದಲಿಗೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡಬಹುದು, ಇದು ಕೂದಲನ್ನು ಬಲಪಡಿಸಿ ಉದುರುವಿಕೆಯನ್ನು ತಡೆಯುತ್ತದೆ.
ಅಗಸೆ ಬೀಜ (Flax Seeds):
ಓಮೇಗಾ-3 ಫ್ಯಾಟಿ ಆಸಿಡ್ ಗಳಲ್ಲಿ ಶ್ರೀಮಂತವಾದ ಅಗಸೆ ಬೀಜಗಳು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ ಮತ್ತು ಒಣಗಿದ ತ್ವಚೆಗೆ ತೇವಾಂಶ ನೀಡುತ್ತವೆ.
ನೆಲ್ಲಿಕಾಯಿ (Amla):
ವಿಟಮಿನ್ C ಯಿಂದ ತುಂಬಿರುವ ನೆಲ್ಲಿಕಾಯಿ ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಕೂದಲು ಬೆಳವಣಿಗೆ ವೇಗವಾಗುತ್ತದೆ.
ಸೊಪ್ಪು ಮತ್ತು ಹಸಿರು ತರಕಾರಿಗಳು:
ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು ಇತ್ಯಾದಿ ಸೊಪ್ಪುಗಳು, ವಿಟಮಿನ್ಗಳನ್ನು ಒಳಗೊಂಡಿದ್ದು, ಕೂದಲಿಗೆ ಬೇಕಾದ ಪೋಷಕಾಂಶವನ್ನು ಒದಗಿಸುತ್ತವೆ.
ಮೊಸರು (Curd/Yogurt):
ಪ್ರೊಬಯೋಟಿಕ್ಸ್ ಮತ್ತು ಪ್ರೋಟೀನ್ಗಳಿಂದ ಸಮೃದ್ಧವಾಗಿರುವ ಮೊಸರು ತ್ವಚೆಯ ಆರೋಗ್ಯ ಉಳಿಸಿ ಕೂದಲು ಬಲಪಡಿಸಲು ಸಹಕಾರಿಯಾಗುತ್ತದೆ.
ಬಾದಾಮಿ ಮತ್ತು ಬೀಜಗಳು (Nuts & Seeds):
ಬಾದಾಮಿ, ವಾಲ್ನಟ್, ಬೀನ್ಸ್ ಇತ್ಯಾದಿಗಳು ಬಯೋಟಿನ್, ವಿಟಮಿನ್ E ಹಾಗೂ ಝಿಂಕ್ ನ ಉತ್ತಮ ಮೂಲ. ಇವು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತವೆ.
ಮೆಂತ್ಯ:
ಮೆಂತ್ಯ ಬೀಜಗಳು ಬಹಳಷ್ಟು ಪ್ರೋಟೀನ್, ವಿಟಮಿನ್ ಎ, ಕೆ, ಸಿ ಮತ್ತು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳನ್ನು ಹೊಂದಿರುತ್ತವೆ. ಇವು ಕೂದಲು ಉದುರುವುದನ್ನು ನಿಲ್ಲಿಸಿ ಕೂದಲನ್ನು ಬಲಪಡಿಸುತ್ತವೆ.
ದಾಳಿಂಬೆ:
ವಿಟಮಿನ್ ಸಿ, ಕೆ, ಫೈಬರ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ಗಳಿಂದ ಸಮೃದ್ಧವಾಗಿರುವ ದಾಳಿಂಬೆ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಮತ್ತು ರಕ್ತದಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.