Tuesday, November 4, 2025

Hair Care | ತಲೆ ಕೂದಲು ಉದುರುತ್ತಿದ್ಯಾ? ಸಿಂಪಲ್ & ಬೆಸ್ಟ್ ಮನೆಮದ್ದು ಇಲ್ಲಿದೆ ನೋಡಿ

ಇಂದಿನ ವೇಗದ ಜೀವನ ಶೈಲಿಯಲ್ಲಿ ಕೂದಲಿನ ಆರೈಕೆಗೆ ಸಮಯ ಕೊಡುವುದು ಅನೇಕರಿಗೆ ಕಷ್ಟವಾಗಿದೆ. ಆದರೆ, ಪ್ರತಿದಿನ ಮೊಬೈಲ್ ಅಥವಾ ರೀಲ್ಸ್ ನೋಡುತ್ತೀರೋ ಆ ಒಂದೆರಡು ನಿಮಿಷಗಳನ್ನು ಕೂದಲಿಗೆ ಮೀಸಲಿಟ್ಟರೆ ಸಾಕು ಉದುರುವ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.

  • ಎಣ್ಣೆ ಮಸಾಜ್: ಪ್ರತೀ ವಾರ ತೆಂಗಿನ ಎಣ್ಣೆ, ಹರಳೆಣ್ಣೆ ಅಥವಾ ಬಾದಾಮಿ ಎಣ್ಣೆಯಿಂದ ತಲೆಮಸಾಜ್ ಮಾಡಿ. ಸ್ವಲ್ಪ ಬಿಸಿ ಎಣ್ಣೆ ಬಳಸಿದರೆ ರಕ್ತಪರಿಚಲನೆಯನ್ನು ಹೆಚ್ಚಿಸಿ ಕೂದಲಿನ ಬೇರುಗಳಿಗೆ ಪೋಷಣೆ ನೀಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ.
  • ನ್ಯಾಚುರಲ್ ಹೇರ್ ವಾಶ್: ಕೃತಕ ಶಾಂಪೂಗಳ ಬದಲು ಸೀಗೆಕಾಯಿ, ಮತ್ತು ಆಮ್ಲಾ ಬಳಸಿ ತಲೆ ತೊಳೆಯಿರಿ. ಇದು ನೆತ್ತಿಯ ನೈಸರ್ಗಿಕ ಎಣ್ಣೆಯನ್ನು ಕಾಪಾಡಿ, ತಲೆಹೊಟ್ಟು ನಿವಾರಣೆ ಮಾಡಿ ಕೂದಲಿಗೆ ಕಾಂತಿ ನೀಡುತ್ತದೆ.
  • ಸಮತೋಲಿತ ಆಹಾರ: ವಿಟಮಿನ್‌ಗಳು, ಪ್ರೋಟೀನ್‌ಗಳು ಮತ್ತು ಖನಿಜಗಳಿಂದ ಸಮೃದ್ಧ ಆಹಾರ ಸೇವಿಸಿ. ಇದು ಕೂದಲು ಉದುರುವಿಕೆಯನ್ನು ತಡೆಯುವುದಲ್ಲದೆ, ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೂ ಪರಿಹಾರ ಕೊಡುತ್ತದೆ.
  • ಉತ್ತಮ ನಿದ್ರೆ: ಸಾಕಷ್ಟು ನಿದ್ರೆ ಮತ್ತು ಧ್ಯಾನ–ಯೋಗದ ಅಭ್ಯಾಸ ಮನಸ್ಸಿಗೆ ಶಾಂತಿ ನೀಡಿ, ನೆತ್ತಿಯ ರಕ್ತಸಂಚಾರ ಸುಧಾರಿಸಿ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)
error: Content is protected !!