ಮಳೆಗಾಲದ ತೇವಾಂಶದಿಂದಾಗಿ ಕೂದಲು ಸಾಕಷ್ಟು ಹಾನಿಗೊಳಗಾಗುತ್ತದೆ. ಈ ಸಮಯದಲ್ಲಿ ಕೂದಲು ಉದುರುವುದು, ತಲೆ ಹೊಟ್ಟು, ಚರ್ಮದ ಸೋಂಕುಗಳು ಸಹಜ. ಆದ್ದರಿಂದ, ಮಳೆಗಾಲದಲ್ಲಿ ಸರಿಯಾದ ಕೂದಲಿನ ಆರೈಕೆ ಅಗತ್ಯವಿದೆ.
ಕೂದಲನ್ನು ಎಷ್ಟು ಸಾಧ್ಯವೋ ಅಷ್ಟು ಒಣವಾಗಿಡಿ (Keep Your Hair Dry)
ಮಳೆಯ ನೀರಿನಿಂದ ಕೂದಲಿಗೆ ಹಾನಿಯಾಗಬಹುದು. ನೀರಿನ ತೇವಾಂಶವು ತಲೆ ಚರ್ಮದ ಸೋಂಕಿಗೆ ಕಾರಣವಾಗಬಹುದು. ಹೀಗಾಗಿ ಸಾಧ್ಯವಾದಷ್ಟು ಕೂದಲನ್ನು ಒಣಗಿಸಿ ಇಟ್ಟುಕೊಳ್ಳಿ.
ಸಾಧಾರಣ ಶ್ಯಾಂಪೂ ಬಳಸಿಕೊಂಡು ನಿಯಮಿತವಾಗಿ ತಲೆ ಸ್ನಾನ(Wash Hair Regularly with Mild Shampoo)
ಮಳೆಗಾಲದಲ್ಲಿ ತಲೆಯ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಇದರಿಂದ ತಲೆಯ ಮೇಲಿನ ತೈಲ ಗ್ರಂಥಿಗಳು ಸಕ್ರಿಯವಾಗುತ್ತವೆ. ದಿನವಿಡೀ ಧೂಳು ಮತ್ತು ತೇವಾಂಶ ಇದ್ದಾರೆ ಶಾಂಪೂ ಹಾಕಿ ತಲೆ ತೊಳೆಯುವುದು ಬಹುಮುಖ್ಯ.
ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಎಣ್ಣೆ ಹಚ್ಚಿ(Oil Your Hair Once or Twice a Week)
ಬಾದಾಮಿ ಅಥವಾ ತೆಂಗಿನ ಎಣ್ಣೆ ಬಳಸಿ ಸೌಮ್ಯವಾಗಿ ಮಸಾಜ್ ಮಾಡಿದರೆ ತಲೆಯ ಚರ್ಮದ ರಕ್ತಸಂಚಾರ ಸುಧಾರಣೆ ಆಗುತ್ತದೆ. ಆದರೆ ಎಣ್ಣೆ ಹಚ್ಚಿದ ಮೇಲೆ ಹೆಚ್ಚಿನ ಕಾಲ ತಲೆ ತೊಳೆಯದೆ ಬಿಡಬೇಡಿ.
ಸ್ಟೈಲಿಂಗ್ ಟೂಲ್‌ಗಳನ್ನು ದೂರವಿಡಿ (Avoid Hair Styling Tools)
ಡ್ರೈಯರ್, ಸ್ಟ್ರೈಟ್ನರ್ ಅಥವಾ ಇತರ ಯಾವುದೇ ಟೂಲ್‌ಗಳ ಬಳಕೆ ಮಳೆಗಾಲದಲ್ಲಿ ಕೂದಲನ್ನು ಮತ್ತಷ್ಟು ಒಣಗಿಸಬಹುದು.
ಅವಶ್ಯಕತೆ ಇದ್ದರೆ ಆಂಟಿ-ಫಂಗಲ್ ಉತ್ಪನ್ನಗಳನ್ನು ಬಳಸಿ(Use Anti-Fungal Hair Products if Needed)
ತೇವಾಂಶದಿಂದ ಡ್ಯಾಂಡ್ರಫ್ ಮತ್ತು ಫಂಗಸ್ ಆಗುವ ಸಾಧ್ಯತೆ ಹೆಚ್ಚು. ಅಂಥ ಸಮಯದಲ್ಲಿ ಆಂಟಿ-ಫಂಗಲ್ ಶ್ಯಾಂಪೂ ಅಥವಾ ತೈಲ ಬಳಸಿ.
ಮಳೆಗಾಲದಲ್ಲಿ ಸರಿಯಾದ ಕೂದಲಿನ ಆರೈಕೆ ಮಾಡಿದರೆ, ಕೂದಲು ಉದುರುವಿಕೆ, ಡ್ಯಾಂಡ್ರಫ್ ಇತ್ಯಾದಿ ಸಮಸ್ಯೆಗಳಿಂದ ದೂರವಿರಬಹುದು. ನೈಸರ್ಗಿಕ ಮತ್ತು ಸೌಮ್ಯ ಉತ್ಪನ್ನಗಳನ್ನು ಬಳಸಿ ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಿ.