HAIR CARE | ಕೂದಲು ಸೊಂಪಾಗಿ ಬೆಳಿಬೇಕಾ? ಬೆಳಗ್ಗೆ ಎದ್ದ ತಕ್ಷಣ ಈ ಜ್ಯೂಸ್‌ ಕುಡಿಯಿರಿ !

ಈಗಿನ ದಿನಗಳಲ್ಲಿ ಜನ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳಲ್ಲಿ ಕೂದಲಿನ ಸಮಸ್ಯೆಯೂ ಒಂದು. ಕೂದಲು ಉದುರುವುದು, ಡ್ರೈ ಆಗುವುದು, ಕೂದಲು ಬೆಳ್ಳಗಾಗುವುದು ಮುಂತಾದ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ. ಇದಕ್ಕೆ ಕಾರಣ ಪೋಷಕಾಂಶಗಳ ಕೊರತೆ. ಇದನ್ನ ಸರಿ ಮಾಡೋದಕ್ಕೆ ಹಾಗೂ ಆರೋಗ್ಯಕರ ಕೂದಲಿನ ಬೆಳವಣಿಗೆ ಹೆಚ್ಚಿಸೋಕೆ ಈ ಐದು ಅದ್ಭುತ ಪಾನೀಯಗಳು ನಿಮಗೆ ಸಹಾಯ ಮಾಡುತ್ತವೆ.

ನೆಲ್ಲಿಕಾಯಿ ಜ್ಯೂಸ್‌: ವಿಟಮಿನ್‌ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿರುವ ನೆಲ್ಲಿಕಾಯಿ ಕೂದಲ ಬೆಳವಣಿಗೆಗೆ ಬಹಳ ಉತ್ತಮವಾಗಿದೆ. ಈ ಜ್ಯೂಸ್‌ಅನ್ನು ಬೆಳಿಗ್ಗೆ ಕುಡಿಯುವುದರಿಂದ ಕ್ಯಾಲೊಜಿನ್‌ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಕ್ಯಾರೆಟ್‌ ಜ್ಯೂಸ್‌: ವಿಟಮಿನ್ ಎ ಮತ್ತು ಬೀಟಾ–ಕ್ಯಾರೋಟಿನ್‌ ಅಂಶಗಳಿಂದ ಸಮೃದ್ಧವಾಗಿರುವ ಕ್ಯಾರೆಟ್‌ ಜ್ಯೂಸ್‌ ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ. ಇದರಿಂದ ಕೂದಲಿನ ಬೆಳವಣಿಗೆ ಅಧಿಕವಾಗುತ್ತದೆ.

ಸೋಂಪು ನೀರು: ಸೋಂಪು ನೀರು ಕೂದಲಿನ ಬೆಳವಣಿಗೆಗೆ ಬಹಳ ಉತ್ತಮವಾದ ಪಾನೀಯಗಳಲ್ಲಿ ಒಂದು. ಇದರಲ್ಲಿರುವ ಆಂಟಿಆಕ್ಸಿಡೆಂಟ್‌, ಜೀವಸತ್ವಗಳು ಮತ್ತು ಖನಿಜಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.

ಅಲೋವೆರಾ ಜ್ಯೂಸ್‌: ಅಲೋವೆರಾ ಕೂದಲಿಗೆ ಉತ್ತಮವಾಗಿದೆ. ಇದರಿಂದ ತಯಾರಿಸಿದ ಜ್ಯೂಸ್‌ ಕೂದಲ ಬೆಳವಣಿಗೆಯನ್ನು ದ್ವಿಗುಣಗೊಳಿಸುತ್ತದೆ. ಇದರಲ್ಲಿರುವ ವಿಟಮಿನ್‌ ಎ, ಸಿ ಮತ್ತು ಇ ಗಳು ನೆತ್ತಿಗೆ ಪೋಷಣೆ ನೀಡುತ್ತವೆ.

ಶುಂಠಿ ನೀರು: ಒಂದು ಕಪ್‌ ನೀರಿಗೆ ಸ್ವಲ್ಪ ಶುಂಠಿ ಹಾಕಿ 4 ರಿಂದ 5 ನಿಮಿಷಗಳವರೆಗೆ ಕುದಿಸಿ. ತಣ್ಣಗಾದ ನಂತರ ಶೋಧಿಸಿ ಕುಡಿಯಿರಿ. ಇದು ಕೂದಲು ತ್ವರಿತವಾಗಿ ಬೆಳೆಯಲು ಸಹಕಾರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!