ಕುವೈತ್‌ ನಲ್ಲಿ ‘ಹಲಾ ಮೋದಿ’ ಕಾರ್ಯಕ್ರಮ: ನನ್ನ ಮುಂದೆ ಮಿನಿ ಭಾರತವೇ ಉದಯಿಸಿದೆ ಎಂದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುವೈತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶೇಖ್ ಸಾದ್ ಅಲ್ ಅಬ್ದುಲ್ಲಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ‘ಹಲಾ ಮೋದಿ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಕ್ಷಣ ನನಗೆ ವೈಯಕ್ತಿಕವಾಗಿ ಬಹಳ ವಿಶೇಷವಾಗಿದೆ. ನನ್ನ ಮುಂದೆ ಮಿನಿ ಇಂಡಿಯಾ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.

ಕುವೈತ್​ನಲ್ಲಿರುವ ಭಾರತೀಯರ ಸಾಧನೆಗಳನ್ನು ಆಚರಿಸಲು ಬಂದಿದ್ದೇನೆ. ನಾನು ಎರಡೂವರೆ ಗಂಟೆಗಳ ಹಿಂದೆಯೇ ಇಲ್ಲಿಗೆ ತಲುಪಿದೆ. ನಿಮ್ಮನ್ನು ನೋಡಿದರೆ ಇಲ್ಲೊಂದು ಮಿನಿ ಭಾರತ ಉದಯವಾದಂತೆ ಅನಿಸುತ್ತಿದೆ. ಭಾರತದ ಪ್ರತಿಯೊಂದು ಪ್ರದೇಶದ ಜನರು ಮತ್ತು ವಿವಿಧ ಭಾಷೆಗಳನ್ನು ಮಾತನಾಡುವ ಜನರು ಇಲ್ಲಿ ಕಾಣಸಿಗುತ್ತಾರೆ. ಆದರೆ ಪ್ರತಿಯೊಬ್ಬರ ಹೃದಯದಲ್ಲಿ ಒಂದೇ ಒಂದು ಪ್ರತಿಧ್ವನಿ ಇದೆ, ಅದುವೇ ಭಾರತ್ ಮಾತಾ ಕಿ ಜೈ ಎಂದರು. ನೆರೆದಿದ್ದ ಜನ ದೊಡ್ಡ ಮಟ್ಟದ ಚಪ್ಪಾಳೆಯೊಂದಿಗೆ ಮೋದಿ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಿಮ್ಮೆಲ್ಲರ ಸಾಧನೆಗಳನ್ನು ಆಚರಿಸಲು ಬಂದಿದ್ದೇನೆ
ಈ ಕ್ಷಣ ನನಗೆ ತುಂಬಾ ವಿಶೇಷವಾಗಿದೆ ನಾಲ್ಕು ದಶಕಗಳಿಗೂ ಹೆಚ್ಚು ಅಂದರೆ 43 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಕುವೈತ್‌ಗೆ ಭೇಟಿ ನೀಡಿದ್ದಾರೆ. ಭಾರತದಿಂದ ಇಲ್ಲಿಗೆ ತಲುಪಲು 4 ಗಂಟೆ ಬೇಕು, ಆದರೆ ಪ್ರಧಾನಿ ಇಲ್ಲಿಗೆ ತಲುಪಲು 4 ದಶಕಗಳೇ ಬೇಕಾಯಿತು. ನೀವು ಕುವೈತ್‌ನಲ್ಲಿ ಭಾರತದ ಪ್ರತಿಭೆ, ತಂತ್ರಜ್ಞಾನ ಮತ್ತು ಸಂಪ್ರದಾಯದ ಮಸಾಲೆಗಳನ್ನು ಬೆರೆಸಿದ್ದೀರಿ. ಅದಕ್ಕಾಗಿಯೇ ನಾನು ಇಂದು ಇಲ್ಲಿಗೆ ಬಂದಿರುವುದು ನಿಮ್ಮನ್ನು ಭೇಟಿಯಾಗಲು ಮಾತ್ರವಲ್ಲ, ನಿಮ್ಮೆಲ್ಲರ ಸಾಧನೆಗಳನ್ನು ಆಚರಿಸಲು ಎಂದರು.

ನಾನು ಕುವೈತ್‌ನ ನಾಯಕರೊಂದಿಗೆ ಮಾತನಾಡಿದಾಗಲೆಲ್ಲ ಅವರು ಇಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಕೊಡುಗೆಯನ್ನು ಶ್ಲಾಘಿಸುತ್ತಾರೆ. ಕುವೈತ್ ನಾಗರಿಕರು ಭಾರತೀಯರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಕೌಶಲ್ಯದಿಂದಾಗಿ ಆಳವಾದ ಮೆಚ್ಚುಗೆಯನ್ನು ಹೊಂದಿದ್ದಾರೆ. ಇಂದು ಭಾರತವು ಹಣ ರವಾನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಯಶಸ್ಸಿನ ಹೆಚ್ಚಿನ ಶ್ರೇಯಸ್ಸನ್ನು ನಿಮ್ಮಂತಹ ಸಮರ್ಪಿತ ವ್ಯಕ್ತಿಗಳಿಗೆ ನೀಡಬಹುದು. ಮುಖ್ಯವಾಗಿ ನಮ್ಮ ದೇಶವಾಸಿಗಳು ನಿಮ್ಮ ಕೊಡುಗೆಯನ್ನು ಗೌರವಿಸುತ್ತಾರೆ.

ಪ್ರಧಾನಿ ಮೋದಿ ಅವರು ಭಾರತೀಯ ಸಮುದಾಯಗಳನ್ನು ಉದ್ದೇಶಿಸಿ, ಭಾರತ ಮತ್ತು ಕುವೈತ್ ಅರೇಬಿಯನ್ ಸಮುದ್ರದ ಎರಡು ಬದಿಗಳಲ್ಲಿವೆ. ನಾವು ರಾಜತಾಂತ್ರಿಕತೆಯಿಂದ ಮಾತ್ರವಲ್ಲದೆ ನಮ್ಮ ಹೃದಯದಿಂದಲೂ ಒಂದಾಗಿದ್ದೇವೆ.’ನಮ್ಮ ವರ್ತಮಾನ ಮಾತ್ರವಲ್ಲ, ನಮ್ಮ ಭೂತಕಾಲವೂ ನಮ್ಮನ್ನು ಸಂಪರ್ಕಿಸುತ್ತದೆ’ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!