ಸಂಪುಟ ವಿಸ್ತರಣೆ ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ :ಹಾಲಪ್ಪ ಆಚಾರ್

ದಿಗಂತ ವರದಿ ರಾಮನಗರ:

ಸಂಪುಟ ವಿಸ್ತರಣೆಯು ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ. ಅವರ ಆದೇಶದಂತೆ ನಾವು ನಡೆಯುತ್ತೇವೆ ಎಂದು ಗಣಿ, ಭೂ ವಿಜ್ಞಾನ ಹಾಗೂ‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಬಿಡದಿಯ ತಮ್ಮಣ್ಣನದೊಡ್ಡಿ ಅಂಗನವಾಡಿಯಲ್ಲಿ ಸ್ಮಾರ್ಟ್ ಕ್ಲಾಸ್ ಯೋಜನೆಗೆ ಚಾಲನೆ ನೀಡಿದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದ ಅವರು ಆನಂದ ಸಿಂಗ್ ಮತ್ತು ಡಿ.ಕೆ. ಶಿವಕುಮಾರ್ ಭೇಟಿ ಬಗ್ಗೆ ನನಗೆ ತಿಳಿದಿಲ್ಲ‌. ಅಧಿಕಾರ ಇಲ್ಲದವರು ಸುಳ್ಳು ಸುದ್ದಿ ಹಬ್ಬಿಸುತ್ತಲೇ ಇರುತ್ತಾರೆ ಎಂದರು.
ಅಂಗನವಾಡಿಗಳಲ್ಲಿ ಎಲ್‌ಕೆಜಿ- ಯುಕೆಜಿ ಆರಂಭ ವಿಚಾರ ಸರ್ಕಾರದ ಹಂತದಲ್ಲಿ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ಯಾವ ಆದೇಶ ಬರುತ್ತದೆಯೋ ಅದರಂತೆ ನಡೆಯುತ್ತೇವೆ. ಅಂಗನವಾಡಿಗಳಲ್ಲೇ ಆರಂಭಿಸುವಂತೆ ಸೂಚನೆ ನೀಡಿದರೆ ಅದಕ್ಕೆ ಸಿದ್ಧತೆ‌ ಮಾಡಿಕೊಳ್ಳುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!