ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದಲ್ಲಿ ಹಿಂಸಾಚಾರ ಹೆಚ್ಚಾಗಿದ್ದು, ಇದು ಪೂರ್ವ ಯೋಜಿತ ಎಂದು ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಹೇಳಿದ್ದಾರೆ.
ಅಕ್ರಮವಾಗಿ ನಿರ್ಮಿಸಿದ್ದ ಮದರಸಾಗಳನ್ನು ನೆಲಸಮ ಮಾಡಿದ ನಂತರ ಗಲಭೆ ಆರಂಭವಾಗಿದೆ. ಆದರೆ ದಾಳಿ ನಡೆಯೋಕೂ ಮುನ್ನವೇ ಆರೋಪಿಗಳ ಮನೆಗಳ ಛಾವಣಿ ಮೇಲೆ ಹತ್ತಿದ್ದರು. ಅಲ್ಲಿ ರಾಶಿ ರಾಶಿ ಕಲ್ಲು ಸಂಗ್ರಹ ಮಾಡಿ ಇಟ್ಟುಕೊಂಡಿದ್ದರು ಎಂದಿದ್ದಾರೆ.
ಪೆಟ್ರೋಲ್ ಬಾಂಬ್ ಹಾಗೂ ಕಲ್ಲುಗಳನ್ನು ಬಳಸಿ ದಾಳಿ ಮಾಡಲಾಗಿದೆ. ದಾಳಿಯ ಮೊದಲೇ ಛಾವಣಿಗಳ ಮೇಲೆ ಕಲ್ಲು ಸಂಗ್ರಹ ಮಾಡಿಟ್ಟುಕೊಳ್ಳಲಾಗಿತ್ತು ಇದು ಪೂರ್ವ ನಿಯೋಜಿತ ಎಂದು ಹೇಳಿದ್ದಾರೆ.
#WATCH | Haldwani violence | DM Nainital, Vandana Singh addresses a press conference.
She says, “You can see (in the video) that the Police force and the administration are not provoking or harming anybody.” pic.twitter.com/e6GL38vQB9
— ANI (@ANI) February 9, 2024