LIFESTYLE | ಅರ್ಧ ವರ್ಷ ಮುಗಿದುಹೋಯ್ತು ಸರಿ, ಈಗ್ಲಾದ್ರೂ ನಿಮಗೋಸ್ಕರ ಈ ಚೇಂಜಸ್‌ ಮಾಡ್ಕೋಳ್ತೀರಾ?

ಪ್ರತೀ ಹೊಸ ವರ್ಷ ಬಂದಾಗಲೂ ಈ ವರ್ಷ ಹೀಗಿರುತ್ತೇನೆ, ಹಾಗಿರುತ್ತೇನೆ, ಒಳ್ಳೆಯದು ತಿನ್ನುತ್ತೇನೆ, ವ್ಯಾಯಾಮ ಮಾಡುತ್ತೇನೆ, ಹಣ ಕಡಿಮೆ ಖರ್ಚು ಮಾಡುತ್ತೇನೆ, ಬೇರೆ ಕೆಲಸ ನೋಡುತ್ತೇನೆ.. ಹೀಗೆ ಸಾಕಷ್ಟು ರೆಸೊಲ್ಯೂಷನ್‌ಗಳನ್ನು ಹಾಕಿಕೊಂಡಿರ್ತೀರಿ. ಆದರೆ ಅದ್ಯಾವುದನ್ನೂ ಮಾಡೋದಕ್ಕೆ ಆಗೋದಿಲ್ಲ. ಹಾಗೇ ನೋಡ್ತಾ ನೋಡ್ತಾ ಒಂದು ವರ್ಷವೇ ಕಳೆದುಹೋಗಿದೆ. ಈಗ್ಲಾದ್ರೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಿ. ಒಂದು ಹೊಸ ಅಭ್ಯಾಸ ರೂಡಿ ಆಗೋಕೆ ಇಪ್ಪತ್ತೊಂದು ದಿನ ಮಾತ್ರ ಸಾಕು.. ಅಷ್ಟು ಸಮಯ ಇದೆ ಅಲ್ವಾ?

ಬೆಳಗ್ಗೆ ಸಮಯಕ್ಕೆ ಸರಿಯಾಗಿ ಎದ್ದು, ಜಿಮ್‌, ಯೋಗ, ವ್ಯಾಯಾಮ, ವಾಕಿಂಗ್‌ ತಪ್ಪದೇ ಮಾಡಿ. ದಿನಕ್ಕೊಂದು ಫಿಸಿಕಲ್‌ ಆಕ್ಟಿವಿಟಿ ಇರಲಿ.

ನೂಡಲ್ಸ್‌, ಗೋಬಿ, ಫಿಝಾ, ಬರ್ಗರ್‌ ಬಿಟ್ಟು ಕಾಳುಬೇಳೆ, ಸೊಪ್ಪು, ತರಕಾರಿ, ಹಣ್ಣಿನ ಬಗ್ಗೆ ಗಮನ ಕೊಡಿ, ಅವೆಲ್ಲ ಹೊಟ್ಟೆ ತುಂಬಿಸೋ ಶಾರ್ಟ್‌ಕಟ್‌ಗಳಷ್ಟೆ. ಇದು ನಿಜವಾದ ದಾರಿ.

ನಿಮ್ಮ ತಪ್ಪಿಗೆ ಇತರರನ್ನು ದೂಷಿಸೋದು ನಿಲ್ಲಿಸಿ, ಎಲ್ಲದಕ್ಕೂ ಕಾರಣ ಹುಡುಕೋದು ನಿಲ್ಲಿಸಿ. ನಿಮ್ಮದೇ ಖುಷಿ ಕಂಡುಕೊಳ್ಳಿ. ಅದರಂತೆ ನಡೆಯಿರಿ.

ಸದಾ ಪಾಸಿಟಿವ್‌ ಆಲೋಚನೆಗಳಿರಲಿ. ಯಾರ ಮೇಲಾದರೂ ಕೋಪ ಬಂದರೆ ಅವರ ಜಾಗದಲ್ಲಿ ನಿಂತು ತಕ್ಷಣ ಆಲೋಚಿಸಿ.

ಮೊಬೈಲ್‌,ಟಿವಿ ಬಳಕೆ ಕಡಿಮೆ ಮಾಡಿ, ರಾತ್ರಿ ಮಲಗುವ ಕೋಣೆಗೆ ಮೊಬೈಲ್‌ ತೆಗದುಕೊಂಡು ಹೋಗಬೇಡಿ. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡಬೇಡಿ.

ಕಷ್ಟಪಟ್ಟು ದುಡಿಯಿರಿ, ನಿಮ್ಮ ಅಚೀವ್‌ಮೆಂಟ್‌ಗಳ ಬಗ್ಗೆ ಹೇಳಿಕೊಂಡು ಓಡಾಡಬೇಡಿ. ಕೆಲಸ ಮಾಡಿ ತೋರಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!