ಹೊಸದಿಗಂತ ಯಲ್ಲಾಪುರ:
ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ತುಡುಗುಣಿಯಿಂದ ಸೂರಿಮನೆಗೆ ಹೋಗುವ ರಸ್ತೆಯು ಸಿಮೆಂಟ್ ರಸ್ತೆಯಾಗಿದೆ. ಒಂದಿಷ್ಟು ದೂರ ಜನರು ನೆಮ್ಮದಿಯಿಂದ ಹೋಗಬಹುದೆಂದರೆ ತುಡುಗುಣಿಯಿಂದ ಮುಂದೆ ಹೊಳೆಯ ಪಕ್ಕದಲ್ಲಿ ಧರೆ ಕುಸಿತವಾಗಿ ಜನರು ಆತಂಕ ಪಡುವಂತಾಗಿದೆ. ಕುಸಿತ ಸ್ವಲ್ಪವೇ ಆಗಿದ್ದು, ಹೆಚ್ಚುಕಮ್ಮಿಯಾದರೆ ಇಡೀ ರಸ್ತೆಯೇ ಕುಸಿದು ಬೀಳುವ ಸಂಭವವಿದೆ.
ಅದನ್ನು ಅರಿತ ಉಮ್ಮಚ್ಗಿ ಪಂಚಾಯತ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಯಲ್ಲಾಪುರ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ ಧಾನವಾಡಕರ ಗಮನಕ್ಕೆ ತಕ್ಷಣ ತಂದು ಅವರೊಂದಿಗೆ ಸ್ಥಳ ಪರಿಶೀಲನೆ ಮಾಡಿ ದುರಸ್ತಿ ಗೆ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಿಡಿಒ ನಸ್ರೀನಾ ಎಕ್ಕುಂಡಿ, ಕಾರ್ಯದರ್ಶಿ ಮೋಹನ್ ಉಮ್ಮಚ್ಗಿ, ಪಂಚಾಯತ ಸ್ಥಳೀಯ ಜನಪ್ರತಿನಿಧಿ ಖೈತಾನ್ ಡಿಸೋಜ, ಮಂಜುನಾಥ ಅಗೇರ ಮೊದಲಾದವರು ಉಪಸ್ಥಿತರಿದ್ದರು.