ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಧನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ ಅವರಿಗೆ ಇಂಡಿಯನ್ ಆಯಿಲ್ ಕಂಪನಿ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಾದ ಹಾಫ್‌ಕೋಟ್‌ನ್ನು ಉಡುಗೊರೆಯಾಗಿ ನೀಡಿದೆ.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಏಕಬಳಕೆ ಪೆಟ್ ಬಾಟಲ್, ಮರು ಬಳಕೆ ಮಾಡಿ ತಯಾರಿಸಿದ ಜಾಕೆಟ್, ಸೋಲಾರ್ ಕುಕ್‌ಟಾಪ್ ಬಿಡುಗಡೆ ಮಾಡಿದ್ದು, ಇಂಡಿಯನ್ ಆಯಿಲ್ ಅಧ್ಯಕ್ಷರು ತ್ಯಾಜ್ಯ ಪೆಟ್ ಬಾಟಲಿಯಿಂದ ತಯಾರಿಸಿದ ಪೇಟ ಮತ್ತು ಹಾಫ್‌ಕೋಟ್‌ನ್ನು ಉಡುಗೊಡೆಯಾಗಿ ನೀಡಿದರು.
ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಲ್ಪಟ್ಟ ಸಮವಸ್ತ್ರವನ್ನು ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ಶ್ರೀ @narendramodi ಯವರಿಗೆ ಉಡುಗೊರೆಯಾಗಿ ನೀಡುವ ಮೂಲಕ ಲೋಕಾರ್ಪಣೆಗೈದ ಇಂಡಿಯನ್ ಆಯಿಲ್ ಕಂಪನಿ#IndiaEnergyWeek #IndiaDrivesE20 pic.twitter.com/zwxoJDWnGa
— Pralhad Joshi (@JoshiPralhad) February 6, 2023