March 15, 2026
Sunday, March 15, 2026
spot_img

ನಾಳೆಯಿಂದ ʼಹಂಪಿ ಉತ್ಸವʼ ಆರಂಭ, ಹೇಗಿದೆ ತಯಾರಿ? ಯಾರೆಲ್ಲಾ ಬರ್ತಾರೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಫೆ.13 ರಿಂದ 15ರ ವರೆಗೆ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದೆ. ನಾಳೆ ಆರಂಭವಾಗುವ ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಮಾಹಿತಿ ನೀಡಿದ್ದಾರೆ. ಉದ್ಘಾಟನೆಯ ದಿನದಂದು ಸಿಎಂ ಆಗಮಿಸಲಿದ್ದು, ಒಂದು ದಿನ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಒಟ್ಟಾರೆ ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಸೌರಭ ನಡೆಯಲಿದೆ. ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಪ್ರಧಾನ ವೇದಿಕೆಯಲ್ಲಿ ಐವತ್ತು ಸಾವಿರ ಆಸನದ ವ್ಯವಸ್ಥೆಯಾಗಿದೆ. ಈ ಬಾರಿ ಒಟ್ಟಾರೆ ಹತ್ತು ಲಕ್ಷ ಜನ ಬರುತ್ತಾರೆ ಎಂದು ಅಂದಾಜಿಸಲಾಗಿದೆ.

ಸ್ಯಾಂಡಲ್‌ವುಡ್‌ ಕಲಾವಿದರಾದ ಶಿವರಾಜ್‌ಕುಮಾರ್‌, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಗಣೇಶ್‌, ರಕ್ಷಿತ್‌ ಶೆಟ್ಟಿ, ರಚಿತಾ ರಾಮ್‌, ಧನಂಜಯ್‌ ಹಾಗೂ ಗಿಲ್ಲಿ ನಟ ಭಾಗಿಯಾಗಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !