ಹಂಪಿಯ ಜಿ20 ಸಭೆ ಯಶಸ್ಸು: ಸುಂದರ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಮಿತಾಬ್ ಕಾಂತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಕರ್ನಾಟಕದ ವಿಜಯನಗರದ ಹಂಪಿಯಲ್ಲಿ ನಡೆದ ಜಿ20 ಸಭೆ (G20 Summit) ಯಶಸ್ವಿಯಾಗಿದೆ.

ಈ ಕುರಿತು ಭಾರತದ ಶೆರ್ಪಾ ಅಮಿತಾಬ್ ಕಾಂತ್ ಮಾಹಿತಿ ನೀಡಿದ್ದು, ಹಂಪಿಯನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಕಾಣುವಂತೆ ಮಾಡಿದ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಗಳ ಅಧಿಕಾರಿಗಳು ಅಭಿನಂದನಾರ್ಹರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರು ಹಾಗೂ ಮಕ್ಕಳ ಪ್ರದರ್ಶನ ಚೆನ್ನಾಗಿತ್ತು. ಹಂಪಿ ಬೈ ನೈಟ್ ಬಹಳ ಒಳ್ಳೆಯ ಅನುಭವ ನೀಡಿದೆ. ಹಂಪಿ ಭಿನ್ನವಾಗಿ ಸುಂದರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ಯಾವುದಕ್ಕೆ ಭಾರತದ ಪ್ರಾಮುಖ್ಯತೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗಿದೆ. ಸಭೆಯಲ್ಲಿ ಜಿ20 ರಾಷ್ಟ್ರಗಳು ಯಶಸ್ವಿಯಾಗಿ ಭಾಗವಹಿಸಿವೆ. ಅಲ್ಲದೇ ಪ್ರಾಪಂಚಿಕ ಅಭಿವೃದ್ಧಿಪರ ವಿಚಾರಗಳು ಚರ್ಚೆಯಾಗಿದ್ದು, ತಾಂತ್ರಿಕತೆಯ ಕೊಂಡುಕೊಳ್ಳುವಿಕೆ ಮತ್ತು ವಿನಿಮಯ ಮಾಡಿಕೊಳ್ಳಲು ಒಪ್ಪಂದವಾಗಿದೆ. ಪ್ರಮುಖವಾಗಿ ಆಫ್ರಿಕನ್ ಒಕ್ಕೂಟಗಳಿಗೆ ಜಿ20 ಸದಸ್ಯತ್ವ ನೀಡಲು ಒತ್ತಾಯಿಸಲಾಗಿದೆ. ಇದಕ್ಕೆ ಉಳಿದ ದೇಶಗಳು ಸಹಮತ ಸೂಚಿಸಿವೆ ಎಂದು ಸ್ಪಷ್ಟನೆ ನೀಡಿದರು.

ಈ ಬಾರಿಯ ಜಿ20 ಶೃಂಗಸಭೆಯು ಜುಲೈ 9ರಿಂದ 16ರವರೆಗೆ ಹಂಪಿಯಲ್ಲಿ ನಡೆದಿದ್ದು, ಭಾರತ ಅಧ್ಯಕ್ಷೀಯ ರಾಷ್ಟ್ರವಾಗಿತ್ತು. ಶೃಂಗಸಭೆಗೆ 20 ದೇಶಗಳ ಪೈಕಿ 19 ದೇಶಗಳ 30 ಪ್ರತಿನಿಧಿಗಳು, 9 ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು ಸೇರಿದಂತೆ ಒಟ್ಟು 52 ಗಣ್ಯರು ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!