ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿ ಕಾಂಗ್ರೆಸ್ ಯಾಕೆ ಗೆಲ್ತಿದೆ ಹೇಳಿ? ನಮ್ಮ ರಾಜ್ಯದ ನಾಯಕರು ಮಾಡಿದ ಪ್ರಚಾರದಿಂದ ಅಲ್ಲ, ಕರ್ನಾಟಕದಿಂದ ಹೋದ ಹಣದಿಂದ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಗಂಭೀರವಾದ ಸ್ಟೇಟ್‌ಮೆಂಟ್ ನೀಡಿದ್ದಾರೆ.
ತೆಲಂಗಾಣ ರಿಸಲ್ಟ್ ಪ್ರಕಟ ಆಗಿಲ್ಲ ಆದರೆ ಅಲ್ಲಿ ಕಾಂಗ್ರೆಸ್ ಭಾರೀ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಅಲ್ಲಿ ಗೆಲ್ಲುತ್ತದೆ. ತೆಲಂಗಾಣ ರಾಜ್ಯದ ಚುನಾವಣೆ ಪ್ರಚಾರಕ್ಕೆ ನಮ್ಮ ನಾಯಕರು ಯಾಕೆ ಹೋಗಬೇಕಿತ್ತು? ಅವರು ಹೋಗಿದ್ದರಿಂದಲೇ ಗೆಲುವು ಎಂದು ಅಂದುಕೊಂಡಿದ್ದಾರೆ. ಆದರೆ ಅದು ಸುಳ್ಳು ಹಣದಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.