Wednesday, December 10, 2025

ಕೈ ಕೊಟ್ಟ ಇಂಡಿಗೋ…9,55,591 ಟಿಕೆಟ್‌ ರದ್ದು, 827 ಕೋಟಿ ರೂ. ರೀಫಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಗೋದ ಸಂಚಾರ ವ್ಯತ್ಯಯ, ವಿಮಾನ ವಿಳಂಬ ಸಮಸ್ಯೆ 7ನೇ ದಿನವೂ ಮುಂದುವರಿದಿದೆ. ಇದರಿಂದಾಗಿ ಒಂದೇ ವಾರದಲ್ಲಿ 5 ಲಕ್ಷಕ್ಕೂ ಅಧಿಕ ಟಿಕೆಟ್‌ಗಳನ್ನ ರದ್ದುಗೊಳಿಸಲಾಗಿದ್ದು, 569.65 ಕೋಟಿ ರೂ.ಗಳನ್ನ ಮರುಪಾವತಿ ಮಾಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (DGCA) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಡಿಸೆಂಬರ್‌ 1 ರಿಂದ ಡಿ.7ರ ನಡುವೆ ಒಟ್ಟು 5,86,705 ಟಿಕೆಟ್‌ ರದ್ದುಗೊಳಿಸಿ 569.65 ಕೋಟಿ ರೂ.ಗಳನ್ನ ಮರು ಪಾವತಿ ಮಾಡಲಾಗಿದೆ. ಇನ್ನೂ ನವಂಬರ್‌ 21 ರಿಂದ ಡಿಸೆಂಬರ್‌ 7ರ ವರೆಗೆ ಒಟ್ಟು 9,55,591 ಟಿಕೆಟ್‌ ರದ್ದುಗೊಳಿಸಿದ್ದು, ಒಟ್ಟು 827 ಕೋಟಿ ರೂ.ಗಳನ್ನ ಮರುಪಾವತಿ ಮಾಡಿದೆ. ಒಟ್ಟು 9,000 ಲಗೇಜ್‌ ಬ್ಯಾಗ್‌ಗಳ ಪೈಕಿ 4,500 ಬ್ಯಾಗ್‌ಗಳನ್ನ ಗ್ರಾಹಕರಿಗೆ ಹಿಂದಿರುಗಿಸಲಾಗಿದೆ. ಮುಂದಿನ 36 ಗಂಟೆಗಳಲ್ಲಿ ಬಾಕಿ ಬ್ಯಾಗ್‌ಗಳನ್ನೂ ತಲುಪಿಸುವ ಗುರಿ ಹೊಂದಿದೆ ಎಂದು ಸಚಿವಾಲಯ ತಿಳಿಸಿದೆ.

ಇಂದು ಇಂಡಿಗೋ 138 ಸ್ಥಳಗಳ ಪೈಕಿ 137 ಸ್ಥಳಗಳಿಗೆ 1,802 ವಿಮಾನಗಳನ್ನ ನಿಯೋಜನೆ ಮಾಡಿದೆ. ಇದರ ಹೊರತಾಗಿಯೂ 500 ವಿಮಾನಗಳ ಹಾರಾಟ ರದ್ದಾಗಿದೆ ಎಂದು ವಿಮಾನಯಾನ ಸಚಿವಾಲಯ ಹೇಳಿದೆ.

error: Content is protected !!