ಕೈಮಗ್ಗ ಸೀರೆ ಅಂದ್ರೆ ಅದು ಕೇವಲ ಉಡುಪಿನಷ್ಟೆ ಅಲ್ಲ. ಈ ಬಟ್ಟೆಗಳಲ್ಲಿ ನೇಯ್ದಿರುವದು ಕಲೆಯ ಪರಂಪರೆ, ಸಂಸ್ಕೃತಿಯ ನಂಟು, ನುರಿತ ಕರಗತಿಯಿಂದ ಒತ್ತಿದ ಶ್ರಮ ಮತ್ತು ನಾಜೂಕಾದ ವಿನ್ಯಾಸಗಳ ಕಲೆ. ಕಾಂಜೀವರಂ ರೇಷ್ಮೆಯ ಹೊಳಪು, ಮೃದು ಹತ್ತಿಯ ಸ್ಪರ್ಶ ಅಥವಾ ಸೊಬಗಿನ ಬಣ್ಣವಿರುವ ರೂಪ ಈ ಎಲ್ಲವು ಹ್ಯಾಂಡ್ ಕ್ರಾಫ್ಟ್ದ್. ಆದರೆ ಈ ಸೀರೆಯನ್ನ ಸರಿಯಾದ ರೀತಿಯಲ್ಲಿ ಸಂರಕ್ಷಿಸೋದು ಬಹುತೇಕರಿಗೆ ತಿಳಿದಿಲ್ಲ. ಇಲ್ಲಿವೆ ಕೈಮಗ್ಗ ಸೀರೆಯನ್ನು ಸೂಕ್ಷ್ಮವಾಗಿ ಆರೈಕೆ ಮಾಡುವ ಕೆಲವು ಟಿಪ್ಸ್ ಇಲ್ಲಿದೆ.
ಡ್ರೈ ಕ್ಲೀನ್ :
ಕೈಮಗ್ಗ ಸೀರೆಗಳು ವಿಶೇಷವಾಗಿ ನೈಸರ್ಗಿಕ ನಾರು, ತರಕಾರಿ ಬಣ್ಣಗಳು ಮತ್ತು ಜರಿ ಬಳಸಿ ತಯಾರಾಗಿರುತ್ತವೆ. ಈ ಬಟ್ಟೆಗೆ ಸಾಮಾನ್ಯ ಬಟ್ಟೆ ತೊಳೆಯುವ ವಿಧಾನಗಳು ಬಳಸೋದು ತಪ್ಪು. ಡ್ರೈ ಕ್ಲೀನಿಂಗ್ ಮಾತ್ರ ಸೀರೆಯ ಸ್ವರೂಪ ಮತ್ತು ಬಣ್ಣವನ್ನು ಕಾಪಾಡುತ್ತದೆ.
ಮೆಷಿನ್ ತೊಳೆಯುವುದು ನಿಷಿದ್ಧ:
ರೇಷ್ಮೆ ಅಥವಾ ಜರಿಯುಳ್ಳ ಸೀರೆಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಹಾಕಿದರೆ ಬಣ್ಣ ಮಾಸುವುದು, ನೂಲುಗಳು ಸಡಿಲವಾಗುವುದು ಅಥವಾ ನೇಯ್ಗೆ ಹಾಳಾಗೋ ಅಪಾಯವಿದೆ. ಹೀಗಾಗಿ ನೈಸರ್ಗಿಕವಾಗಿ ತೊಳೆಯುವಂತಹ ಬಟ್ಟೆಗಳನ್ನು ಕೈಯಲ್ಲಿ ಹದವಾಗಿ ತೊಳೆಯುವುದು ಒಳಿತು.
ಕಲೆ ಬಿದ್ದರೆ ಸ್ಪಾಟ್ ಕ್ಲೀನಿಂಗ್:
ಸೀರೆ ಮೇಲೆ ಏನಾದರೂ ಸಣ್ಣ ಕಲೆ ಬಿದ್ದರೆ, ತಣ್ಣನೆಯ ನೀರಿನಲ್ಲಿ ಮೃದುವಾದ ಬಟ್ಟೆ ಬಳಸಿಕೊಂಡು ನಿಧಾನವಾಗಿ ಒರೆಸಬೇಕು. ಯಾವುದೇ ರಾಸಾಯನಿಕ ಅಥವಾ ಬಲವಾದ ಕ್ಲೀನರ್‌ಗಳನ್ನು ಉಪಯೋಗಿಸಬಾರದು.
ನೆರಳಿನಲ್ಲಿ ಒಣಗಿಸಿ:
ಸೂರ್ಯನ ನೇರ ಬೆಳಕಿನಲ್ಲಿ ಒಣಗಿಸಿದರೆ ಬಣ್ಣ ಮಸುಕಾಗಬಹುದು. ಸೀರೆ ತೂಕದಿಂದ ವಿನ್ಯಾಸ ಬದಲಾಗಬಾರದೆಂದು ಸಮತಟ್ಟಾದ ಮೇಲ್ಮೈ ಮೇಲೆ ಒಒಣಗಿಸುವುದು ಸೂಕ್ತ.
ಇಸ್ತ್ರಿ ಮಾಡೋವಾಗ ಎಚ್ಚರಿಕೆ:
ಹೆಚ್ಚು ಬಿಸಿಯ ಇಸ್ತ್ರಿ ಅಥವಾ ನೇರ ಶಾಖ ಸೀರೆಯ ಮೃದು ನಾರಿನಲ್ಲಿ ಹಾನಿ ಉಂಟುಮಾಡಬಹುದು. ಸೀರೆಯ ಹಿಮ್ಮುಖ ಭಾಗಕ್ಕೆ ಮಾತ್ರ ಇಸ್ತ್ರಿ ಮಾಡುವುದು ಒಳಿತು.
ಸರಿಯಾದ ರೀತಿಯಲ್ಲಿ ಮಡಚಿ ಇರಿಸಿ:
ಪ್ಲಾಸ್ಟಿಕ್ ಕವರ್ ಬಳಸದೇ ಹತ್ತಿಯ ಬಟ್ಟೆಯಲ್ಲಿ ಸೀರೆ ಸುತ್ತಿ ಇರಿಸಬೇಕು. ತಿಂಗಳಿಗೊಮ್ಮೆ ಮಡಿಸಿ ಬದಲಾವಣೆ ಮಾಡುವುದು ಸೂಕ್ತ.
ಕೈಮಗ್ಗ ಸೀರೆಗಳ ಜೀವನಾವಧಿಯನ್ನು ಹೆಚ್ಚಿಸಲು ಈ ಸಲಹೆಗಳು ಸಹಾಯ ಮಾಡುತ್ತವೆ. ಬಟ್ಟೆಯ ಸೌಂದರ್ಯವನ್ನು ಉಳಿಸಿಕೊಂಡು, ವಂಶಪಾರಂಪರ್ಯವಾಗಿ ಮುಂದೂಡಬಹುದಾದ ಐತಿಹಾಸಿಕ ಎಸ್ತೇಟಿಕ್ ಸೀರೆಗಳನ್ನು ಹೀಗೆ ಕಾಪಾಡಬೇಕು.