ಹೊಸದಿಗಂತ ವರದಿ, ಹುಬ್ಬಳ್ಳಿ:
ಆದಿಪುರುಷ್ ಸಿನಿಮಾ ಬಿಡುಗಡೆ ಬಳಿಕ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಿದ್ದು, ಇದೀಗ ಚಿತ್ರದ ಸಂಭಾಷಣೆಕಾರ ಮನೋಜ್ ಮುನ್ತಾಶಿರ್ ನೀಡಿದ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮನೋಜ್ ಮುನ್ತಾಶಿರ್ ಹಿಂದುಗಳ ಆರಾದ್ಯ ದೈವ ಶ್ರೀ ಹನುಮಾನ್ ದೇವರೇ ಅಲ್ಲ ಎಂದು ಹೇಳಿದ್ದಾರೆ.ಇದು ಹಿಂದುಗಳ ಧಾರ್ಮಿಕ ನಂಬಿಕೆಗೆ ಘಾಸಿ ಮಾಡಿದೆ.
ಈಗಾಗಲೇ ನೋಜ್ ಮುನ್ತಾಶಿರ್ ಮೇಲೆ ಸಂಭಾಷಣೆ ಕೊಳಕು ಮಟ್ಟದ್ದಾಗಿದೆ. ಟಪೋರಿ ಭಾಷೆ ಬಳಸಿ ಶ್ರೀರಾಮ, ಹನುಮಾನ್,ಸೀತಾಮಾತೆಗೆ ಅವಮಾನ ಮಾಡಿದ್ದಾರೆ ಆರೋಪವಿದ್ದು, ಕೊಲೆ ಬೆದರಿಕೆ ಕೂಡ ಬಂದಿತ್ತು. ಇದರ ಬೆನ್ನಲ್ಲೇ ಹನುಮಾನ್ ದೇವರೇ ಅಲ್ಲ ಎಂಬ ಹೇಳಿಕೆ ನೀಡಿದ ವಿವಾದಕ್ಕೆ ತುಪ್ಪ ಸುರಿದಿದ್ದಾರೆ.
ಹನುಮಾನ್ ದೇವರಲ್ಲ. ನಾವು ಭಜರಂಗಬಲಿಯನ್ನು ದೇವರು ಮಾಡಿದ್ದೇವೆ ಅಷ್ಟೆ. ಹನುಮಾನ್ ಓರ್ವ ಭಕ್ತ. ರಾಮನ ಮೇಲಿನ ಭಕ್ತಿಯಿಂದ ನಾವು ದೇವರ ಸ್ಥಾನ ನೀಡಿದ್ದೇವೆ ಎಂದು ಮನೋಜ್ ಮುನ್ತಾಶೀರ್ ಹೇಳಿದ್ದಾರೆ.
ಸಂಭಾಷಣೆ ವಿರುದ್ಧ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಮನೋಜ್ ಮುನ್ತಾಶಿರ್ ಸಮರ್ಥಿಸಿಕೊಂಡಿದ್ದರು. ಇದೇ ವೇಳೆ ಅಭಿಮಾನಿಗಳಿಗೆ ನೋವಾಗಿದೆ ಕಾರಣಕ್ಕೆ ಸಂಭಾಷಣೆಗೆ ಕತ್ತರಿ ಹಾಕಲು ನಿರ್ಧರಿಸಿದ್ದೇವೆ. ಆದರೆ ಸಂಭಾಷಣೆ ತಪ್ಪಾಗಿಲ್ಲ ಎಂದು ಸಮರ್ಥಿಸಿದ್ದರು. ಸಂಭಾಷಣೆ ಸಮರ್ಥಿಸಿಕೊಳ್ಳಲು ನನಗೆ ನೂರು ಕಾರಣವಿರಬಹುದು. ಆದರೆ ಅದು ಅಭಿಮಾನಿಗಳ ನೋವು ದೂರಮಾಡದು. ಪ್ರೇಕ್ಷಕರ ಅಭಿಮತಕ್ಕಿಂತ ನನಗೆ ಯಾವುದೂ ದೊಡ್ಡದಲ್ಲ. ಹೀಗಾಗಿ ಅಭಿಮಾನಿಗಳ ಆಕ್ಷೇಪಕ್ಕೆ ಕಾರಣವಾದ ಕೆಲ ಸಂಭಾಷಣೆಯನ್ನು ಬದಲಾಯಿಸಲು ನಾವು ನಿರ್ಧರಿಸಿದ್ದೇವೆ. ಮುಂದಿನ ವಾರದಿಂದಲೇ ಈ ಬದಲಾವಣೆ ಚಿತ್ರದಲ್ಲಿ ಕಾಣಸಲಿದೆ’ ಎಂದು ಹೇಳಿದ್ದರು.